ಜಿಲ್ಲೆ

ಹಳ್ಳಿ ಅಭಿವೃದ್ಧಿಗೆ ಬೇಕು ಒಗ್ಗಟ್ಟು

ಔರಾದ್: ಗ್ರಾಮಗಳು ಅಭಿವೃದ್ಧಿಯಾಗಬೇಕಾದರೆ ಹಳ್ಳಿಯ ಜನರು ಒಗ್ಗಟ್ಟಿನಿಂದ ಇರಬೇಕು ಎಂದು ತಾಲೂಕು ಪಂಚಾಯಿತಿಯ ವಿಶೇಷ ತರಬೇತುದಾರ ರಾಜೇಂದ್ರ ಮಾಳಿ ಹೇಳಿದರು.

ತಾಲೂಕಿನ ಲಾಧಾ ಗ್ರಾಪಂನಲ್ಲಿ ರಿಲಾಯನ್ಸ್ ಫೌಂಡೇಷನ್ ವತಿಯಿಂದ ಬುಧವಾರ ಜರುಗಿದ ಸಮುದಾಯ ನಾಯಕತ್ವ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಗ್ರಾಪಂಗಳೇ ಸ್ಥಳೀಯ ಸಕರ್ಾರಗಳಾಗಿ ಕಾರ್ಯನಿರ್ವಹಿಸುತ್ತವೆ. ಇಲ್ಲಿ ವಿವಿಧ ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತದೆ. ಇದನ್ನು ಸಮರ್ಪಕ ಬಳಸಿಕೊಳ್ಳುವ ನಿಟ್ಟಿನಲ್ಲಿ ಸರ್ವರೂ ಒಗ್ಗಟ್ಟಿನಿಂದ ಇರಬೇಕು ಎಂದರು.

ಗ್ರಾಪಂಗೆ ಬರುವ ಅನುದಾನ ಹಾಗೂ ಇತರ ಸಕರ್ಾರೇತರ ಸಂಸ್ಥೆಗಳ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಸೌಲಭ್ಯಗಳನ್ನು ಒದಗಿಸಿಕೊಳ್ಳಬೇಕು. ಸಕರ್ಾರದ ಜತೆಯಲ್ಲಿ ಸ್ಥಳೀಯ ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರು ಜತೆಯಾದರೆ ಪ್ರತಿಯೊಂದು ಹಳ್ಳಿಗಳು ಅಭಿವೃದ್ಧಿ ಹೊಂದುತ್ತವೆ ಎಂದರು.

ಪಿಡಿಒ ಶೆಶಿಕಪುರ ರೂಪನರ್, ಸಂತಪುರ ಪಿಡಿಒ ಅನೀಲಕುಮಾರ, ಪ್ರಮುಖರಾದ ಮಾರುತಿ ಗಾದಗೆ, ಭರತ ದದ್ದಾಪುರೆ, ಬಸವರಾಜ ಮಾನೂರೆ, ಸುಭಾಷ, ಸಿದ್ರಾಮೇಶ್ವರ, ಗಣಪತಿ ಮಾನೂರೆ, ಚಿನ್ನಮ್ಮ ಇದ್ದರು.