ಜಿಲ್ಲೆ

ಹಳ್ಳದರಾಯ ರಥೋತ್ಸವ ಅದ್ದೂರಿ

ಸಂಡೂರು: ವಡ್ಡು ಗ್ರಾಮದಲ್ಲಿ ಶ್ರೀಹಳ್ಳದರಾಯ (ಆಂಜನೇಯ ಸ್ವಾಮಿ) ರಥೋತ್ಸವ ಮಂಗಳವಾರ ನಡೆಯಿತು.

98 ವರ್ಷಗಳ ಹಿಂದೆ ಕ್ಷಯನಾಮ ಸಂವತ್ಸರದಲ್ಲಿ ಮೊದಲ ಬಾರಿಗೆ ರಥೋತ್ಸವ ಆರಂಭಿಸಲಾಗಿತ್ತು. ಪ್ರಸ್ತುತ ಮಾಘ ಮಾಸ ಶುಕ್ಲ ಪಕ್ಷದಂದು ತೇರನ್ನು ಎಳೆಯಲಾಯಿತು. ಭಕ್ತರು ಹೋಳಿಗೆ ನೈವೇದ್ಯ, ಕಾಯಿ, ಹೂ ಸಮರ್ಪಿಸಿದರು.