ಜಿಲ್ಲೆ

ಹಳೇಕೋಟೆಗೆ ಆಗಮಿಸಿದ ಜ್ಯೋತಿ ರಥಯಾತ್ರೆ

ಅಶೋಕ್ ಕುಮಾರ್ ಎನ್

ಸಿರಗುಪ್ಪ: ಉಟಕನೂರು ಶ್ರೀ ಮರಿಬಸವಲಿಂಗ ಶಿವಯೋಗಿಗಳ ಜ್ಯೋತಿ ರಥಯಾತ್ರೆ ಭಾನುವಾರ ಹಳೇಕೋಟೆಗೆ ಆಗಮಿಸಿತು.

ಮಾನ್ವಿ ತಾಲೂಕಿನ ಊಟಕನೂರು ಶ್ರೀ ಅಡವಿಸಿದ್ದೇಶ್ವರ ಶಿಲಾಮಂದಿರ ಲೋಕಾರ್ಪಣೆ, ಪೂಜ್ಯರ ಪಟ್ಟಾಧಿಕಾರ ಮಹೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಿರುವ ರಥಯಾತ್ರೆಗೆ ಫೆ.3 ರಂದು ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದಿಂದ ಚಾಲನೆ ಸಿಕ್ಕಿತ್ತು.

ದೇವಸ್ಥಾನದ ಕಾರ್ಯಕ್ರಮಗಳ ವಿವರ ನೀಡುವ ಉದ್ದೇಶದಿಂದ ರಥಯಾತ್ರೆ ಆಯೋಜಿಸಲಾಗಿದೆ. ಹಳೇಕೋಟೆಯಲ್ಲಿ ಶ್ರೀ ಮರಿಶಿವಯೋಗಿಗಳ ಮಠದ ಉತ್ತರಾಧಿಕಾರಿ ಶ್ರೀ ಸಿದ್ದಬಸವ ಸ್ವಾಮಿಗಳ ನೇತೃತ್ವದಲ್ಲಿ ಕಳಸ ಮತ್ತು ಸಕಲ ವಾದ್ಯಗಳೊಂದಿಗೆ ಸದ್ಭಕ್ತರು ಸ್ವಾಗತಿಸಿದರು. ಬಸ್ ನಿಲ್ದಾಣದಿಂದ ಆರಂಭಗೊಂಡ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆಯ ಮೂಲಕ ಜ್ಯೋತಿ ರಥಯಾತ್ರೆ ನಡೆಯಿತು.