ಜಿಲ್ಲೆ

ಹಳೇ ವೈಷಮ್ಯಕ್ಕೆ ಐವರ ಮೇಲೆ ಹಲ್ಲೆ?

ಚಿಂತಾಮಣಿ: ತಾಲೂಕಿನ ಅಂಬಾಜಿದುರ್ಗ ಹೋಬಳಿ ಉಪ್ಪಾರಪೇಟೆಯಲ್ಲಿ ಹಳೇ ವೈಷ್ಯಮದ ಹಿನ್ನೆಲೆಯಲ್ಲಿ ಗುರುವಾರ ಮಧ್ಯರಾತ್ರಿ ಲಾಂಗ್​ ಮತ್ತು ಮಚ್ಚು ಹಿಡಿದು ಬಂದ ಗುಂಪೊಂದು ಗ್ರಾಮದ ಐವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದೆ.

ಎಂ.ಶಫೀ, ಅರ್ಬಾಜ್​, ಜುನೇದ್​ ಅಹಮದ್​, ಜಮೀಲ್​ ಮತ್ತು ಆಖೀಲ್​ ಅಹಮದ್​ ಹಲ್ಲೆಗೆ ಒಳಗಾದವರು. ಖಲಾಂದರ್​ ಪಾಷಾ ಬಾಬು, ಸನ್​ವಿದ್​ ಶರೀಫ್​, ಜಿಶಾನ್​ ಶರೀಪ್​, ಫಿದೋರ್ಸ್​ ಶರೀಫ್​ ಆರೋಪಿಗಳು ಗುರುತಿಸಲಾಗಿದೆ.

ಎರಡು ಕುಟುಂಬಗಳ ನಡುವೆ ಹಳೇ ದ್ವೇಷದದಿಂದ ಕೃತ್ಯ ನಡೆದಿದೆ ಎನ್ನಲಾಗಿದೆ. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು, ತೀವ್ರವಾಗಿ ಗಾಯಗೊಂಡ ಜುನೇದ್​ ಮತ್ತು ಅರ್ಬಾಜ್​ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆಯ ಎಂವಿಜಿ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.