ಕುಶಾಲನಗರದ ವಾಸವಿ ಮಹಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ದಿ.ಇ.ಕೆ.ಸುಬ್ರಾಯ ಅವರಿಗೆ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಚ್.ವಿ.ಶಿವಪ್ಪ, ಪ್ರೊ.ಎಚ್.ಎಲ್.ವೆಂಕಟೇಶ್, ಭಾರದ್ವಾಜ್ ಕೆ.ಆನಂದತೀರ್ಥ, ಪ್ರೊ.ಎಚ್.ಡಿ.ಲಿಂಗರಾಜು, ಎಚ್.ಡಿ.ನೀಲಕಂಠರಾಯ ಇದ್ದರು. 
ಜಿಲ್ಲೆ

ಹಳೇ ವಿದ್ಯಾರ್ಥಿಗಳಿಂದ ಶ್ರದ್ಧಾಂಜಲಿ ಸಲ್ಲಿಕೆ

ಕುಶಾಲನಗರ: ಸಮೀಪದ ಹೆಬ್ಬಾಲೆ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ದಿ.ಇ.ಕೆ.ಸುಬ್ರಾಯ ಅವರಿಗೆ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ವಾಸವಿ ಮಹಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಬ್ರಾಯ ಅವರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ ಮಾತನಾಡಿದ ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಎಲ್.ವೆಂಕಟೇಶ್, ಮುಖ್ಯ ಶಿಕ್ಷಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದ ಸುಬ್ರಾಯ ಅವರು ಶಿಸ್ತುಬದ್ಧ ಜೀವನ ನಡೆಸಿದ್ದರು. ಅವರಿಂದ ಪಾಠ ಕಲಿತ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದಾರೆ ಎಂದು ಸ್ಮರಿಸಿದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್.ವಿ.ಶಿವಪ್ಪ, ಸಾಹಿತಿ ಭಾರಧ್ವಾಜ್ ಕೆ.ಆನಂದ ತೀರ್ಥ ಮಾತನಾಡಿದರು.

ಪ್ರೊ.ಎಚ್.ಡಿ.ಲಿಂಗರಾಜು, ಕೇಂದ್ರೀಯ ತೆರಿಗೆ ಮತ್ತು ಸುಂಕ ಇಲಾಖೆಯ ನಿವೃತ್ತ ಸಹಾಯಕ ಆಯುಕ್ತ ಎಚ್.ಡಿ.ನೀಲಕಂಠರಾಯ, ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ, ಮುಖಂಡರಾದ ಎಚ್.ಎಚ್.ವಿಜಯ, ಕೆ.ವಿ.ಉಮೇಶ್, ಎಚ್.ಟಿ.ಪ್ರಸನ್ನ, ಎಚ್.ಬಿ.ಜಯಮ್ಮ, ಎಚ್.ಎಸ್.ಲೋಕೇಶ್, ಕೆ.ವರದ ಇದ್ದರು.