ಜಿಲ್ಲೆ

ಹಳೇ ಬೈಪಾಸ್ ರಸ್ತೆಯನ್ನು ಅಭಿವೃದ್ಧಿ ಪಡಿಸಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಗರದಲ್ಲಿ ನಿರ್ಮಿಸಿರುವ ರೋಡ್‌ಡಿವೈಡರ್‌ನ್ನು ಹಲವೆಡೆ ತೆರವುಗೊಳಿಸುವುದು,ಯೂಟರ್ನ್ ಹಾಗೂ ಪಾದಚಾರಿ ಮಾರ್ಗ ನಿ ರ್ಮಾಣ ಕುರಿತಂತೆ ವೈಜ್ಞಾನಿಕ ವರದಿಗೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ರಸ್ತೆ ಸುರಕ್ಷಾ ತಜ್ಞ ರು ಹಾಗೂ ಸಂಚಾರಿ ಪೊಲೀಸರಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ಬೇರೆ ಬೇರೆಯಾ ಗಿರುವ ರಾ.ಹೆ.ಹಾಗೂ ನಗರ ರಸ್ತೆಗಳ ನಿಯಮಗಳ ಅಧ್ಯಯನ ನಡೆಸಿ,ನಾಗರಿಕರ ಬೇಡಿಕೆಗಳನ್ನು ನಗರದಲ್ಲಿ ಎಲ್ಲೆಲ್ಲಿ ಡಿವೈಡರ್ ತೆರವು ಗೊಳಿಸ ಬೇಕೆಂಬುದನ್ನು ಪರಿಶೀಲಿಸಬೇಕು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವೈಜ್ಞಾನಿಕವಾಗಿಯೇ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಆದ್ದರಿಂದ ಡಿ ವೈಡರ್ ತೆರವಿನಿಂದಾಗುವ ತೊಂದರೆ,ಅನಾಕೂಲಗಳ ತಜ್ಞರ ಸಮಿತಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಇದನ್ನು ಆಧರಿಸಿ ಮುಂದಿನ ಕ್ರಮ ಕೈ ಗೊಳ್ಳುವುದಾಗಿ ಹೇಳಿದರು.

ಪ್ರಸಾವನೆ ಸಲ್ಲಿಸಿ
ರಾ.ಹೆ.ಪ್ರಾಧಿಕಾರ ನಗರದ ಹಳೇ ಬೈಪಾಸ್ ರಸ್ತೆಯನ್ನು ನಗರ ಸಭೆಗೆ ಹಸ್ತಾಂತರಿಸುವ ಮುನ್ನ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪ ಡಿಸ ಬೇಕು. ಬೀದಿ ದೀಪಗಳ ಅಳವಡಿಕೆ,ಅಗತ್ಯವಿರುವಡೆ ಸ್ಕೈವಾಕ್ ನಿರ್ಮಿಸಬೇಕು. ಈ ಕುರಿತ ಡಿಪಿಆರ್ ಸಿದ್ಧಪಡಿಸಿ ಕಳಿಸಿದರೆ ಅನು ದಾನ ಬಿಡುಗಡೆಗಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಕೇಂದ್ರ ಸಚಿವ ಎ.ನಾರಾಯ ಣಸ್ವಾಮಿ ಅವರು ತಿಳಿಸಿದ್ದಾರೆಂದು ಡಿಸಿ ಹೇಳಿದರು.

ಹಿರಿಯೂರು ಬೈಪಾಸ್ ರಸ್ತೆಯಲ್ಲಿ ತಲೆ ಎತ್ತಿರುವ ಅನಧಿಕೃತ ಹೋಟೆಲ್,ಡಾಬಾ ಹಾಗೂ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೆದ್ದಾರಿ,ನಗರ ರಸ್ತೆಗಳಲ್ಲಿ ಸೂಚನಾ ಫಲಕಗಳ ಅವಳವಡಿಕೆ,ಬ್ಲಾಕ್‌ಸ್ಪಾಟ್,ರೈಲ್ವೆ ಮೇಲು ಸೇತುವೆ ಸ್ಥಳಗಳಲ್ಲಿ ನೀರು ನಿಲ್ಲದಿರಲು ಕೈ ಗೊಳ್ಳ ಬೇಕಾಗಿರುವ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು. ಎಸ್‌ಪಿ ಕೆ.ಪರಶುರಾಮ್,ಪಿಡಬ್ಲ್ಬೂಡಿ ಸಚಿವ ಪಿ.ಎಸ್.ಮಲ್ಲಿಕಾ ರ್ಜುನ್, ರಾ.ಹೆ.ಯೋಜನಾ ನಿರ್ದೇಶಕ ಗೌರವ್,ಆರ್‌ಟಿಒ ಪ್ರಮುಥೇಶ್,ಡಿಎಚ್‌ಒ ಡಾ.ಆರ್.ರಂಗನಾಥ್,ಹೆದ್ದಾರಿ ಸುರಕ್ಷಾ ಅಧಿ ಕಾರಿ ನವೀನ್ ಮತ್ತಿತರ ಅಧಿಕಾರಿಗಳಿದ್ದರು.