filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.3144441, 0.509375);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 35; 
ಜಿಲ್ಲೆ

ಹಳೇ ಅಂಚೆ ಕಚೇರಿ ಮುಂದೆ ನಿಂತ ಮಳೆ ನೀರು

ಕೊಳ್ಳೇಗಾಲ: ಪಟ್ಟಣದಲ್ಲಿ ಭಾನುವಾರ ಬಿದ್ದ ಮಳೆಯಿಂದಾಗಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಚರಂಡಿ ನೀರು ಸೋಮವಾರ ಹಳೇ ಅಂಚೆ ಕಚೇರಿ ಮುಂಭಾಗ ನಿಂತು ಜನಸಾಮಾನ್ಯರಿಗೆ ತೊಂದರೆ ಉಂಟಾಯಿತು.

ಡಾ.ರಾಜ್‌ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯೇ ಇಲ್ಲ. ಹಿಂದಿದ್ದ ಸಣ್ಣ ಚರಂಡಿಯನ್ನು ರಸ್ತೆಯಲ್ಲಿರುವ ಅಂಗಡಿ-ಮುಂಗಟ್ಟಿನವರು ಬಂದ್ ಮಾಡಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಈ ಕಾರಣ ಮಳೆ ಬಿದ್ದರೆ ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿಲ್ಲ, ಚರಂಡಿ ತುಂಬಿ ರಸ್ತೆ ಹರಿಯುತ್ತಿದೆ.

ಈ ಪರಿಸ್ಥಿತಿ ನಗರಸಭೆ ಕಾರ್ಯಾಲಯದ ಕೂಗಳತೆ ದೂರದಲ್ಲಿದ್ದರೂ ಅಧಿಕಾರಿಗಳು ಇಲ್ಲಿಯವರೆವಿಗೂ ಗಮನಹರಿಸುತ್ತಿಲ್ಲ. ಇನ್ನು ಮಳೆ ಬಂದರೆ ಚರಂಡಿ ನೀರು ರಸ್ತೆಯ ಮೇಲೆ ಹೊಳೆಯಂತೆ ಹರಿಯುತ್ತದೆ. ಮಳೆ ನಿಂತರೂ ಕೆಲ ದಿನಗಳ ಕಾಲ ಜನರು ಕೊಳಚೆ ನೀರಲ್ಲೇ ಕಾಲಿಟ್ಟು ಸಂಚರಿಸಬೇಕಾದ ಪರಿಸ್ಥಿತಿ ಇರುತ್ತದೆ.

ಇದು ಒಂದು ದಿನದ ಗೋಳಲ್ಲ ಹಲವು ವರ್ಷದ ಸಮಸ್ಯೆ. ಯಾವ ಅಧಿಕಾರಿಯಿಂದಾಗಲಿ, ಜನಪ್ರತಿನಿಧಿಯಿಂದಾಗಲಿ ಈ ಸಮಸ್ಯೆಗೆ ತೆರೆ ಎಳೆಯಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ರಾಜ್‌ಕುಮಾರ್ ರಸ್ತೆ ಗುಂಡಿ ಅಧ್ವಾನ ಸ್ಥಿತಿ ತಲುಪಿ ಜನರು ನಗರಸಭೆ ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದ ಕಾರಣ ರಸ್ತೆಯಲ್ಲಿ ತೇಪೆ ಕಾಮಗಾರಿ ನಡೆಸಲಾಗಿತ್ತು. ಆದರೆ, ಚರಂಡು ನೀರು ಹರಿಯಲು ಕ್ರಮವಹಿಸಿಲ್ಲ. ಮಳೆ ಬಂದರೆ ಈ ಎರಡು ಪ್ರಮುಖ ರಸ್ತೆಗಳಲ್ಲಿ ಜನರು ಸಂಚಾರ ಮಾಡು ವುದೇ ಕಷ್ಟವಾಗುತ್ತಿದೆ.