ಜಿಲ್ಲೆ

ಹಳೆಯ ವೈಷಮ್ಯಕ್ಕೆ ಬರ್ಬರ ಹತ್ಯೆ

ಕಲಬುರಗಿ: ನಗರದ ಸೈಯದ್ ಚಿಂಚೋಳಿ ರಸ್ತೆ ಮತ್ತು ಭೀಮಳ್ಳಿ ಗ್ರಾಮದಲ್ಲಿ ಹಳೆಯ ವೈಷಮ್ಯದಿಂದಾಗಿ ಇಬ್ಬರನ್ನು ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಲಾಗಿದೆ.
ಶಿವಾಜಿ ಚೌಕ್ ನಿವಾಸಿ ರೋಹನ್ ವಾಕೋಡೆ (೨೨) ಹಾಗೂ ಭೀಮಳ್ಳಿಯ ಮಶಾಕ್‌ಸಾಬ್ ಮಕ್ಕಾಸಾಬ್ (೪೨) ಕೊಲೆಯಾದವರು. ಸೈಯದ್ ಚಿಂಚೋಳಿ ರಸ್ತೆ ಆಶ್ರಯ ಕಾಲನಿ ಇಟ್ಟಿಗೆ ಭಟ್ಟಿ ಬಳಿ ದುಷ್ಕರ್ಮಿಗಳು ರೋಹನ್‌ಗೆ ಮಾರಕಾಸ್ತçಗಳಿಂದ ಇರಿದು ತಲೆಮರೆಸಿಕೊಂಡಿದ್ದಾರೆ. ಏಷಿಯನ್ ಮಾಲ್‌ನ ಅಂಗಡಿಯೊಂದರಲ್ಲಿ ಮೊಬೈಲ್‌ಗಳಿಗೆ ಕವರ್ ಹಾಕುವ ಕೆಲಸ ಮಾಡುತ್ತಿದ್ದ. ಮಂಗಳವಾರ ಬೆಳಗ್ಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋದವ ಮಧ್ಯರಾತ್ರಿ ಶವವಾಗಿ ಪತ್ತೆಯಾಗಿದ್ದಾನೆ.

ಸ್ಥಳಕ್ಕೆ ಪೊಲೀಸ್ ಆಯುಕ್ತ ಚೇತನ್ ಆರ್., ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಎಸಿಪಿ ರಾಜಣ್ಣ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಮೃತನ ಸಹೋದರ ಧನರಾಜ ನೀಡಿದ ದೂರಿನನ್ವಯ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.