ಜಿಲ್ಲೆ

ಹಳೆಯ ವಿದ್ಯಾರ್ಥಿಗಳ ಸಮಾವೇಶ

ಚಿತ್ರದುರ್ಗ: ಸೀಬಾರ-ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ರಜತ ಮಹೋತ್ಸವದ ಅಂಗವಾಗಿ ಭಾನುವಾರ ಸಂಸ್ಥೆ ಆವರಣದಲ್ಲಿ‘ಸಮಾಗಮ’ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಎಸ್ಸೆಸ್ಸೆಲ್ಸಿ, ಸೆಕೆಂಡ್‌ಪಿಯುಸಿ ವಿಭಾಗದಲ್ಲಿ ಅತಿಹೆಚ್ಚು ಅಂಕಗಳೊಂ ದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಂಸ್ಥೆ ಸ್ಥಾಪಕ ಎಚ್.ಜಲೀಲ್‌ಸಾಬ್,ಕಾ ರ‌್ಯದರ್ಶಿ ಎಂ.ನೀಲಕಂಠದೇವರು, ಟಿ.ನರಸೀಪುರ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ,ಮುಖ್ಯಶಿಕ್ಷಕರಾದ ಬಿ.ಜಿ.ಶಿವರುದ್ರಯ್ಯ, ಜಿ.ಆರ್.ಚನ್ನಬಸಪ್ಪ ಹಾಗೂ ಪ್ರಾಚಾರ‌್ಯೆ ಸುಧಾ,ಹಿರಿಯ ಶಿಕ್ಷಕರಾದ ಎ.ಆರ್.ರಂಗಪ್ಪ,ಎಸ್‌ಎಂಬಿ ಸ್ವಾಮಿ ಮತ್ತಿತರರು ಇದ್ದರು.
-