ಜಿಲ್ಲೆ

ಹಳೆ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗೆ ದೇಣಿಗೆ

ಹಳೆ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗೆ ದೇಣಿಗೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ತಾಲೂಕಿನ ಸಾಂಬ್ರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಹಾಗೂ ಸಂಡೇ ಟು ಸಂಡೇ ತಂಡದ ಸದಸ್ಯರು ತಾವು ಕಲಿತ ಶಾಲೆಗಾಗಿ ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಈಚೆಗೆ ಶಾಲೆಗೆ ಭೇಟಿ ನೀಡಿದ ಹಳೆ ವಿದ್ಯಾರ್ಥಿಗಳು

ತಾವು ಕಲಿತ ಶಾಲೆಗೆ 73,500 ರೂ. ಸಂಗ್ರಹಿಸಿ ಶಾಲೆಗೆ ಜಾಗ ಖರೀದಿಸಲು ದೇಣಿಗೆ ನೀಡಿದೆ.

ಅವೀನ ತಿಮ್ಮಾಪೂರಮಠˌಉತ್ತಮ ಎಲಿಗಾರˌಮಹೇಶ ಬಮ್ಮನವಾಡಿˌ ಬಸು ಅಂಗಡಿˌರಾಜು ಕೊಣ್ಣೂರಮಠˌ ಆನಂದ ತಿಮ್ಮಾಪೂರಮಠˌಮಹೇಂದ್ರ ತಿಮ್ಮಾಪೂರಮಠˌ ಅವೀನಾಶ ಪಾಟೀಲˌಅಜೀತ ಪಾಟೀಲˌ ರಾಹುಲ ಗಾವಡೆˌ ಶ್ರೀಕಾಂತ ಬಿರಜೆ ಸೇರಿದಂತೆ ಇತರರು ದೇಣಿಗೆ ನೀಡಿದ್ದಾರೆ.

ಹಳೆ ವಿದ್ಯಾರ್ಥಿಗಳ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.