ಜಿಲ್ಲೆ

ಹಳೆ‌ ಮಾದರಿಯಂತೆ ಬಿಜೆಪಿ ಗಟ್ಟಿಯಾಲಿದೆ

ಬಳ್ಳಾರಿ : ರಾಜ್ಯದಲ್ಲಿ ಡಿಸೆಂಬರ್ ತಿಂಗಳ ಬಳಿಕ ಹಳೆಯ ‌ಮಾದರಿಯಂತೆ ಬಿಜೆಪಿ ಗಟ್ಟಿಯಾಗಲಿದೆ ಎಂದು ಜಲ ಶಕ್ತಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಬಸವ ಭವನದಲ್ಲಿ ಬಿಜೆಪಿ ಸದಸ್ಯತ್ವಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಮಾಜಿ ಸಚಿವ ಶ್ರೀರಾಮುಲು ಅವರಿಗೆ ಅವರೇ ಸಾಟಿಯಾಗಿದ್ದಾರೆ. ರಾಮುಲು ಅವರಿಗೆ ಸ್ಟಾರ್ಟಿಂಗ್ ಟ್ರಬಲ್ ಇದೆ. ಶೀಘ್ರದಲ್ಲೇ ಎಲ್ಲ ಸರಿ ಹೋಗುತ್ತದೆ. ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಜಿಲ್ಲೆಯಲ್ಲಿ ಬೇರೆಯಾದ ವೇಳೆ ಚುನಾವಣೆಯಲ್ಲಿ ಏನು ಆಗಿದೆ ಎಂಬುದು ಎಲ್ಲರಿಗೆ ತಿಳಿದ ವಿಷಯವಾಗಿದೆ. ರೆಡ್ಡಿ ಸಹೋದರರು ವೈ ಮನಸ್ಸು ಬಿಟ್ಟು ಒಂದಾಗಿ, ಇಲ್ಲದಿದ್ದರೆ ನಿಮಗೆ‌ ನಷ್ಟ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದರ ಬಗ್ಗೆ ಹಲವು ಬಾರಿ ಮಾತನಾಡಲಾಗಿದೆ. ಸದ್ಯ ಕಾನೂನು ತನ್ನ ಕೆಲಸ ಮಾಡುತ್ತಿದೆ. ರಾಜೀನಾಮೆ ‌ನೀಡುವ ವಿಚಾರ ಕಾಂಗ್ರೆಸ್ ‌ಪಕ್ಷಕ್ಕೆ ಬಿಟ್ಟಿದ್ದು, ಬಿಜೆಪಿ ಇದರ ಬಗ್ಗೆ ನಿರಂತರ ‌ಹೋರಾಟ ನಡೆಯಲಿದೆ. ಬಿಜೆಪಿ ನಾಯಕರು ಸಿದ್ದರಾಮಯ್ಯ ಪತ್ನಿ ಬಗ್ಗೆ ಯಾರು ಮಾತನಾಡಿಲ್ಲ. ಅವರ ಬಗ್ಗೆ ಗೌರವವಿದೆ. ಮುಡಾ ಹಗರಣದಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡುತ್ತದೆ, ಅವರ ಪಕ್ಷಕ್ಕೆ‌ ಬಿಟ್ಟಿದ್ದು ಎಂದು ಹೇಳಿದರು.