ತೋ.ವಿ.ವಿ.ಯ 48 ಮಂದಿ ಬೋಧಕರು, ಬೋಧಕೇತರರು‌ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುತ್ತಿದ್ದಾರೆ. 
ಜಿಲ್ಲೆ

ಹಳೆ ಪಿಂಚಣಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಬಾಗಲಕೋಟೆ: ವಿವಿಧ ವಿಶ್ವವಿದ್ಯಾಲಯ, ಇಲಾಖೆಗಳಿಂದ ತೋಟಗಾರಿಕೆ ವಿ.ವಿ.ಗೆ ಬಂದಿರುವ ನೌಕರರಿಗೆ ಹಳೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ತೋ.ವಿ.ವಿ.ಯ 48 ಮಂದಿ ಬೋಧಕರು, ಬೋಧಕೇತರರು‌ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುತ್ತಿದ್ದಾರೆ.

2009ರಲ್ಲಿ ತೋಟಗಾರಿಕೆ ವಿ.ವಿ ಬಾಗಲಕೋಟೆಯಲ್ಲಿ ಆರಂಭವಾಯಿತು. ಹಳೆ ಪಿಂಚಣಿ ಕೊಡುತ್ತೇವೆ ಎಂದಿದ್ದರಿಂದ ಬೇರೆ, ಬೇರೆ‌ ವಿ.ವಿ. ಗಳಿಂದ ಬಂದಿದ್ದೇವೆ. ನಾವು 2006ಕ್ಕೆ ಮುಂಚೆಯೇ ನೌಕರಿಗೆ ಸೇರಿದ್ದೇವೆ. ಆದ್ದರಿಂದ ಹಳೆ ಪಿಂಚಣಿ ಅನ್ವಯಿಸಬೇಕು ಎಂದು ಆಗ್ರಹಿಸಿದರು.

1987ರಲ್ಲಿ ಹಳೆ ಪಿಂಚಣಿಯಡಿ ಕೆಲಸಕ್ಕೆ ಸೇರಿದ್ದ ಡಾ.ಡಿ.ಆರ್. ಪಾಟೀಲ ಅವರು 34 ವರ್ಷ ಸೇವೆ‌ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿಯಾಗಿ 15 ತಿಂಗಳಾದರೂ ಪಿಂಚಣಿ ನೀಡುತ್ತಿಲ್ಲ ಎಂದು ದೂರಿದರು. ಕರ್ನಾಟಕ ‌ಸೇವಾ ನಿಯಮ 252 ಬಿ ಪ್ರಕಾರ ಹೊಸ ವಿ.ವಿ.ಗೆ ಬಂದಿದ್ದನ್ನು ನೂತನ ನೇಮಕ ಎಂದು ಪರಿಗಣಿಸುವಂತಿಲ್ಲ. ನಿವೃತ್ತಿ ಸೌಲಭ್ಯ ಅರದಹರಾಗಿದ್ದು, ಕೂಡಲೇ ಎಲ್ಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಡಾ.ವಿ.‌ದೇವಪ್ಪ, ಡಾ.ಡಿ.ಆರ್.ಪಾಟೀಲ, ಡಾ.ಎಂ.ಕೆ. ಹೊನ್ನಬೈರಯ್ಯ, ಡಾ.ವೆಂಕಟೇಶಲು, ಡಾ.ಕುಲಪತಿ ಹಿಪ್ಪರಗಿ, ಡಾ. ಫಕ್ರುದ್ದೀನ್ ಇದ್ದರು.