ಹಳಿಯಾಳ: ಕರ್ನಾಟಕ್ ಬಂದ್ ಬೆಂಬಲಿಸಿ ಸೋಮವಾರ ಐಕ್ಯ ಹೋರಾಟ ಸಮಿತಿ ನಡೆಸಿದ ಹಳಿಯಾಳ್ ಬಂದ್-ಹರತಾಳ ಯಶಸ್ವಿಯಾಯಿತು. ಆರ್ಥಿಕ ವಹಿವಾಟು ವ್ಯಾಪಾರ ಇತ್ಯಾದಿಗಳು ಬೆಳಗ್ಗೆಯಿಂದಲೇ ಸ್ಥಗಿತಗೊಂಡಿದ್ದವು. ಮೆಡಿಕಲ್ ಸ್ಟೋರ್ಸ್ ಹಾಗೂ ಆಸ್ಪತ್ರೆಗಳು ತೆರೆದಿದ್ದವು. ಬಸ್ ಸಂಚಾರ ಸಂಜೆಯವರೆಗೂ ಸ್ಥಗಿತಗೊಂಡಿತ್ತು.
ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ಸಿಐಟಿಯು ಹಾಗೂ ಕಾರ್ವಿುಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಬ್ಲಾಕ್ ಕಾಂಗ್ರೆಸ್ ಹಾಗೂ ವಿ.ಪ ಸದಸ್ಯ ಎಸ್.ಎಲ್.ಘೊಟ್ನೇಕರ ಅಭಿಮಾನಿ ಬಳಗ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
ರಸ್ತೆ ತಡೆ: ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಯ ಕರ್ನಾಟಕ ಸಂಘಟನೆಯವರು ಬಸವೇಶ್ವರ ವೃತದಲ್ಲಿ ಧಾರವಾಡ-ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಧರಣಿ ನಡೆದರು. ಐಕ್ಯ ಹೋರಾಟ ಸಮಿತಿಯವರು ವನಶ್ರೀ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಸರಿಸುತ್ತಿರುವ ಜನವಿರೋಧಿಯನ್ನು ಖಂಡಿಸಿದರು. ಮನವಿ ಪತ್ರವನ್ನು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು.
ತಾಲೂಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಅಶೋಕ ಮೇಟಿ, ಸಂದೀಪಕುಮಾರ ಬೊಬಾಟೆ, ಮಂಜುನಾಥ ಬೆಡದೊಳಕರ, ಪ್ರಾಂತ ರೈತ ಸಂಘದ ಆರ್.ಎಮ್ವುುಲ್ಲಾ, ಸಿಐಟಿಯು ಸಂಘಟನೆಯ ಹರೀಷ ನಾಯ್ಕ, ಠಕ್ಕಪ್ಪ ಗುರಬಕ್ಕಣ್ಣನವರ, ಸಲೀಮ ಸೈಯ್ಯದ, ಅಂಗನವಾಡಿ ಸಂಘಟನೆಯ ಜಯಶ್ರೀ ಹಿರೇಕರ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಚಂದ್ರಕಾಂತ ದುರ್ವೆ, ಮಹೇಶ ಆನೆಗುಂದಿ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ತಾಲೂಕ ಅಧ್ಯಕ್ಷ ಸಿರಾಜ ಮುನವಳ್ಳಿ, ಆಟೋ ರಿಕ್ಷಾ ಸಂಘದ ಅಧ್ಯಕ್ಷ ಅಬ್ದುಲ್ ಸತ್ತಾರ, ಹಿರಿಯ ನಾಗರಿಕ ವೇದಿಕೆಯ ಜಿ.ಡಿ.ಗಂಗಾಧರ, ಮಾಜಿ ಸೈನಿಕರ ಸಂಘ, ಸವಿತಾ ಸಮಾಜ, ಬಿಸಿಯೂಟ ನೌಕರರ ಸಂಘದ ಕಾರ್ಯಕರ್ತರು ಇದ್ದರು.
ಕಾಂಗ್ರೆಸ್ನವರು ನಡೆಸಿದ ಪ್ರತಿಭಟನೆಯಲ್ಲಿ ವಿಪ ಸದಸ್ಯ ಎಸ್.ಎಲ್. ಘೊಟ್ನೇಕರ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಪುರಸಭಾ ಸದಸ್ಯೆ ಸುವರ್ಣ ಮಾದರ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಮಾಜಿ ಸೈನಿಕ ಸುರೇಶ ಶಿವಣ್ಣನವರ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹನೋರಿಯಾ ಬೃಗಾಂಜಾ, ಯುವಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ರೋಹಣ ಬೃಗಾಂಜಾ, ಎಂ.ವಿ.ಘಾಡಿ, ಜಿ.ಪಂ ಸದಸ್ಯ ಕೃಷ್ಣ ಪಾಟೀಲ, ಲಕ್ಷ್ಮೀ ಕೊರ್ವೆಕರ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಪುರಸಭಾ ಸದಸ್ಯ ಅಜರ ಬಸರಿಕಟ್ಟಿ, ಫಯಾಜ್ ಶೇಖ್ ಇತರರು ಇದ್ದರು. ಪ್ರತಿಭಟನೆ ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರ್ಗೆ ಸಲ್ಲಿಸಿದರು.