ಜಿಲ್ಲೆ

ಹಳಿಯಾಳ, ದಾಂಡೇಲಿಯಲ್ಲಿ ಸೋಂಕಿತರ ಸಂಖ್ಯೆ ಸಾವಿರ

ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರ 89 ಜನರಿಗೆ ಹೊಸದಾಗಿ ಕರೊನಾ ಕಾಣಿಸಿಕೊಂಡಿದ್ದು, 126 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

ಕಾರವಾರದಲ್ಲಿ 13, ಕುಮಟಾದಲ್ಲಿ 5, ಹೊನ್ನಾವರದಲ್ಲಿ 18, ಭಟ್ಕಳದಲ್ಲಿ 10, ಶಿರಸಿಯಲ್ಲಿ 12, ಯಲ್ಲಾಪುರದಲ್ಲಿ 5, ದಾಂಡೇಲಿ ಹಾಗೂ ಹಳಿಯಾಳದಲ್ಲಿ 26, ಜನರಿಗೆ ಸೋಂಕು ಇರುವುದು ಖಚಿತವಾಗಿದೆ.

ಒಟ್ಟಾರೆ ಸೋಂಕಿತರ ಸಂಖ್ಯೆ 3776 ಕ್ಕೇರಿದೆ. ಹಳಿಯಾಳ ಮತ್ತು ದಾಂಡೇಲಿ ಸೋಂಕಿತರ ಸಂಖ್ಯೆ 1081 ಕ್ಕೇರಿದೆ.

ಕಾರವಾರದಲ್ಲಿ 14, ಕುಮಟಾದಲ್ಲಿ 3, ಹೊನ್ನಾವರದಲ್ಲಿ 7, ಭಟ್ಕಳದಲ್ಲಿ 11, ಶಿರಸಿಯಲ್ಲಿ 13, ಸಿದ್ದಾಪುರದಲ್ಲಿ 22, ಯಲ್ಲಾಪುರದಲ್ಲಿ 1,ಮುಂಡಗೋಡಿನಲ್ಲಿ 13, ಹಳಿಯಾಳ ಹಾಗೂ ದಾಂಡೇಲಿ ಸೇರಿ 42 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಬಿಡುಗಡೆಯಾದವರ ಸಂಖ್ಯೆ 2907 ಕ್ಕೆ ತಲುಪಿದೆ.

ಶಾಸಕ ಸುನೀಲ ನಾಯ್ಕಗೆ ಕೋವಿಡ್: ಭಟ್ಕಳ ಶಾಸಕ ಸುನೀಲ ನಾಯ್ಕ ಅವರಿಗೆ ಕರೊನಾ ಸೋಂಕು ದೃಡಪಟ್ಟಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಅವರು ಗುರುವಾರ ಮುರ್ಡೆಶ್ವರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ರ್ಯಾಪಿಡ್ ಟೆಸ್ಟ್​ನಲ್ಲಿ ಪಾಸಿಟಿವ್ ಬಂದಿತ್ತು. ಈ ಕುರಿತು ಫೇಸ್​ಬುಕ್​ನಲ್ಲಿ ಮಾಹಿತಿ ನೀಡಿದ ಅವರು, ‘ತನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ’ ಎಂದಿದ್ದಾರೆ.