ಹಳಯೂರು ಗ್ರಾಮದಲ್ಲಿ ಶನೇಶ್ವರ ಸ್ವಾಮಿ ಪೂಜಾ ಮಹೋತ್ಸವ ನಡೆಯಿತು. 
ಜಿಲ್ಲೆ

ಹಳಯೂರು ಗ್ರಾಮದಲ್ಲಿ ಶನಿದೇವರ ಮಹೋತ್ಸವ

ಬೈಲಕುಪ್ಪೆ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶನಿದೇವರ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿ ಹಳೆಯೂರು ಗ್ರಾಮದ ದೇವಸ್ಥಾನದ ಆವರಣ ಮತ್ತು ಸುತ್ತಮುತ್ತಲಿನ ಪ್ರಮುಖ ಬೀದಿಗಳನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗರ್ಭಗುಡಿಯಲ್ಲಿ ಗಣಪತಿ ಹೋಮ ನೆರವೇರಿತು. ಬಳಿಕ ಮಹಾಮಂಗಳಾರತಿ ನಡೆಯಿತು. ಶನಿದೇವರ ವಿಗ್ರಹವನ್ನು ವಾಹನದ ಮೂಲಕ ಕಾವೇರಿ ನದಿಗೆ ಕೊಂಡೊಯ್ದು ವಿವಿಧ ಪೂಜೆ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಾನುವಾರ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.