ಜಿಲ್ಲೆ

ಹಲ್ಲೆ ಮಾಡಿದ್ದಕ್ಕೆ 4 ತಿಂಗಳು ಜೈಲು ಶಿಕ್ಷೆ !

ಬಸವಕಲ್ಯಾಣ: ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪಿಗೆ ಇಲ್ಲಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ 4 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ತಾಲೂಕಿನ ಕೋಹಿನೂರ ಪಹಾಡ್ ಗ್ರಾಮದ ಮದರ್ (ಸಲ್ಮಾನ್) ಮೆಹಬೂಬ್ ಸಾನೂರೆ (26) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಕಳೆದ ಜನವರಿ 6ರಂದು ಕೋಹಿನೂರ ಪಹಾಡ್ ಗ್ರಾಮದ ಮಹ್ಮದ್ ಐನುಲ್ಲಾ ಮತೇಶಾ ಎನ್ನುವ ವ್ಯಕ್ತಿ ಮೇಲೆ ಮದರ್ ಹಲ್ಲೆ ನಡೆಸಿದ್ದ. ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿ ನೀಡಿದ ದೂರಿನ ಮೇಲೆ ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್ಐ ಜಯಶ್ರೀ ಹೊಡಲ್ ಅವರು ಆರೋಪಿ ವಿರದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಬಗ್ಗೆ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶ ಬಿ.ಪಿ. ಚಂದ್ರಯ್ಯ ಅವರು ಆರೋಪಿಗೆ 4 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದೂರುದಾರರ ಪರ ಸಹಾಯಕ ಸರ್ಕಾರಿ ಅಭಿಯೋಜಕ ಜಗದೇವಿ ಚೊಂಡೆ ವಾದಿಸಿದ್ದರು.