ಚಿತ್ರದುರ್ಗ: ನಗರದಲ್ಲಿ ಈಚೆಗೆ ಅನ್ಯ ಕೋಮಿನ ಯುವತಿಗೆ ಡ್ರಾಪ್ ನೀಡಿದ ಯುವಕನ ಮೇಲೆ ಹಲ್ಲೆ ನಡೆಸಿದ್ದ ನಾಲ್ವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ) ಅಡಿ ಕೂಡ ದೂರು ದಾಖಲಾಗಿದ್ದು, ಡಿವೈಎಸ್‌ಪಿ ದಿನಕರ್ ತನಿಖೆ ಮುಂದುವರಿಸಿದ್ದಾರೆ.
ಹಲ್ಲೆಗೆ ಒಳಗಾದ ಯುವಕ ಉಮೇಶ್ ಹೇಳಿಕೆ ಆಧರಿಸಿ ಈ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ತಿಳಿಸಿದ್ದಾರೆ.