ಜಿಲ್ಲೆ

ಹಲ್ಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಆನಂದಕುಮಾರ ಭಮ್ಮನ್ನವರ

ಹಲ್ಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ: ನಗರದ ಹಳೆ ಕೋರ್ಟ್ ಆವರಣದಲ್ಲಿ ಈಚೆಗೆ ಹಳೆ ದ್ವೇಷದ ಹಿನ್ನಲೆ ಜಹೀರ ಅಬ್ಬಾಸ್ ಮೋಹಿದ್ದಿನಸಾಬ್ ಹುಕ್ಕೇರಿ ಎಂಬುವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಾರ್ಕೆಟ್ ಪೊಲೀಸರು ಬಂಧಿಸಿ ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರದ ಸುಭಾಷ ನಗರದ ನಿವಾಸಿ ಸೋಹೆಲ್ ರಪೀಕಅಹ್ಮದ್ ಇಮಾಮದಾರ(36), ,ಅರ್ಬಾಜ್ ಆರೀಫಸೈಯದ್ ( 28 ) ಬಂಧಿತ ಆರೋಪಿಗಳು.

ಹಳೆ ದ್ವೇಷದ ಹಿನ್ನೆಲೆ ಆರೋಪಿಗಳು ಹಲ್ಲೆಗೊಳಗಾದ ವ್ಯಕ್ತಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿದೆ.