ಜಿಲ್ಲೆ

ಹಲಾಲ್​ ಮುಕ್ತ ದೀಪಾವಳಿಗೆ ಮುತಾಲಿಕ ಕರೆ

ಹುಬ್ಬಳ್ಳಿ : ಹಿಂದು ಸಮಾಜದವರು ಹಲಾಲ್​ ಮುಕ್ತ ದೀಪಾವಳಿ ಆಚರಿಸಬೇಕು ಹಾಗೂ ಹಲಾಲ್​ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾರಾಟಗೊಳ್ಳುವ ಬಹುತೇಕ ಉತ್ಪನ್ನಗಳಿಗೆ ಹಲಾಲ್​ ಪ್ರಮಾಣಪತ್ರ ಪಡೆದುಕೊಳ್ಳುವುದು ಹೆಚ್ಚಾಗಿದೆ. ದಿನಬಳಕೆ ವಸ್ತುಗಳು, ಔಷಧಿ, ತುಳಸಿ ಉತ್ಪನ್ನಗಳು, ಹಪ್ಪಳ ಸೇರಿದಂತೆ ಬಹುತೇಕ ಉತ್ಪನ್ನಗಳು ಹಲಾಲ್​ ಪ್ರಮಾಣಪತ್ರ ಪಡೆದುಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಜಮಾತ್​ ಉಲೆಮಾ ಹಿಂದ್​ ಹಲಾಲ್​ ಟ್ರಸ್ಟ್​ ಎಂಬ ಸಂಸ್ಥೆ ಈ ಹಲಾಲ್​ ಪ್ರಮಾಣ ಪತ್ರ ನೀಡುತ್ತಿದೆ. ಇದಕ್ಕೆ ಸರ್ಕಾರದ ಪರವಾನಿಗೆ ಇಲ್ಲ. ಆದರೆ, ಹಲಾಲ್​ ಪ್ರಮಾಣ ಪತ್ರ ಇರಬೇಕೆಂಬ ಕಲ್ಪನೆಯನ್ನು ಜನಸಾಮಾನ್ಯರಲ್ಲಿ ಬಿತ್ತಲಾಗಿದೆ. ಹೀಗಾಗಿ, ಸಾರ್ವಜನಿಕರು ಸಹ ಉತ್ಪನ್ನಗಳನ್ನು ಖರೀದಿಸುವ ಸಂದರ್ಭದಲ್ಲಿ ಹಲಾಲ್​ ಪ್ರಮಾಣ ಪತ್ರ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.
ಹಲಾಲ್​ ಪ್ರಮಾಣ ಪತ್ರ ಪಡೆದುಕೊಳ್ಳಲು ಒಂದೊಂದು ಉತ್ಪನ್ನಕ್ಕೆ ಕನಿಷ್ಠ 50 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಪ್ರಮಾಣ ಪತ್ರ ನೀಡಲು ಪಡೆದ ಶುಲ್ಕವನ್ನು ಉಗ್ರಗಾಮಿ ಸಂಟನೆಗಳಿಗೆ ಪ್ರೋತ್ಸಾಹ ನೀಡಲು ಬಳಸಲಾಗುತ್ತಿದೆ. ಪಿಎ್​ಐ ಸಂಟನೆಗೂ ಇದೇ ಟ್ರಸ್ಟ್​ನಿಂದ ಹಣ ಹೋಗುತ್ತದೆ. ಉಗ್ರಗಾಮಿ ಚಟುವಟಿಕೆಗಳು, ಗಲಭೆಗಳು, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಕೊಲೆಗಳಿಗೆ ಇದೇ ಹಣ ಬಳಕೆಯಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ತಕ್ಷಣ ಜಮಾತ್​ ಉಲಮಾ ಹಿಂದ್​ ಹಲಾಲ್​ ಟ್ರಸ್ಟ್​ ಅನ್ನು ಹಾಗೂ ಅದು ನೀಡುವ ಪ್ರಮಾಣ ಪತ್ರವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಹಲಾಲ್​ ಪ್ರಮಾಣ ಪತ್ರದ ವಿರುದ್ಧ ಜಾಗೃತಿ ಮೂಡಿಸಲು ಕರಪತ್ರ ಹಂಚಲಾಗುವುದು. ಬ್ಯಾನರ್​ಗಳನ್ನು ಕಟ್ಟಲಾಗುವುದು. ಹಿಂದುಗಳು ಸಹ ದೀಪಾವಳಿ ಸಂದರ್ಭದಲ್ಲಿ ಹಿಂದುಗಳ ಬಳಿಯೇ ಸಲಕರಣೆಗಳನ್ನು ಖರೀದಿಸಬೇಕು ಎಂದು ಆಗ್ರಹಿಸಿದರು.
ಕಳೆದ 70 ವರ್ಷಗಳಿಂದ ಮತಬ್ಯಾಂಕ್​ಗಾಗಿ ಕಾಂಗ್ರೆಸ್​ ಹಲಾಲ್​ಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ಮುಂದಿನ ಒಂದು ವರ್ಷದಲ್ಲಿ ಭಾರತವನ್ನು ಹಲಾಲ್​ ಮುಕ್ತವನ್ನಾಗಿಸಲಾಗುವುದು. ಹಲಾಲ್​ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಆಂದೋಲನ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ತಟ್ಟಿಸಲಾಗುವುದು ಎಂದರು.
ಶ್ರೀರಾಮಸೇನೆ ರಾಜ್ಯ ಕಾರ್ಯದಶಿರ್ ಗಂಗಾಧರ ಕುಲಕಣಿರ್, ಹಿಂದು ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ, ಗುರುಪ್ರಸಾದ ಗೌಡ, ಹನುಮಂತಸಾ ನಿರಂಜನ, ರೂಪಾ ದೌಳಿ ಸುದ್ದಿಗೋಷ್ಠಿಯಲ್ಲಿ ಇದ್ದರು.