ಜಿಲ್ಲೆ

ಹಲವು ಮಹನೀಯರ ತ್ಯಾಗದ ಫಲವೇ ಸ್ವಾತಂತ್ರ

ರಾಮದುರ್ಗ: ಭಾರತ ದೇಶದ ಸ್ವಾತಂತ್ರಕ್ಕಾಗಿ ಅನೇಕ ಮಹನೀಯರು ಪ್ರಾಣ ಮುಡಿಪಾಗಿಟ್ಟು ಹೋರಾಡಿ, ನಮಗೆ ಸ್ವಾತಂತ್ರ ತಂದು ಕೊಟ್ಟಿದ್ದಾರೆ ಎಂದು ತಹಸೀಲ್ದಾರ್​ ಪ್ರಕಾಶ ಹೊಳೆಪ್ಪಗೋಳ ಹೇಳಿದರು.

ಪಟ್ಟಣದ ತೇರಬಜಾರದಲ್ಲಿ ಗುರುವಾರ ಸಾರ್ವಜನಿಕ ಧ್ವಜಾರೋಹಣ ಹಾಗೂ ಅರಮನೆ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನಬದ್ಧ ಹಕ್ಕು ಮತ್ತು ಕರ್ತವ್ಯಗಳ ಪಾಲನೆ ಮಾಡುವ ಮೂಲಕ ದೇಶದ ಪ್ರಗತಿಗೆ ಕೆ ಜೋಡಿಸಬೇಕು ಎಂದರು.

ಸ್ಥಳಿಯ ಶಾಸಕ ಅಶೋಕ ಪಟ್ಟಣ ಅವರ ಅನುಪಸ್ಥಿತಿಯಲ್ಲಿ ತಹಸೀಲ್ದಾರ್​ ಪ್ರಕಾಶ ಹೊಳೆಪ್ಪಗೋಳ ಅವರು ಮಹಾತ್ಮ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬಿ.ಎನ್​. ಮುನವಳ್ಳಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಅರಮನೆ ಮೆದಾನದಲ್ಲಿ ಪೊಲೀಸ್​, ಗಹರಕ ದಳ ಮತ್ತು ಎನ್​ಸಿಸಿ ಕೆಡೆಟ್​ಗಳಿಂದ ಪಥಸಂಚಲನ ನಡೆಯಿತು. ಮಕ್ಕಳಿಂದ ದೇಶಾಭಿಮಾನ ಸಾರುವ ಸಾಂಸತಿಕ ಕಾರ್ಯಕ್ರಮಗಳು ನೆರವೇರಿದವು.
ತಾಪಂ ಇಒ ಪ್ರವಿಣಕುಮಾರ ಸಾಲಿ, ಸಿಪಿಐ ಐ.ಆರ್​. ಪಟ್ಟಣಶೆಟ್ಟಿ, ೇತ್ರ ಶಿಣಾಧಿಕಾರಿ ಆರ್​.ಟಿ. ಬಳಿಗಾರ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ, ತೋಟಗಾರಿಕೆ ಸಹಾಯಕ ನಿರ್ದೇಶಕಿ ಸಂಗೀತಾ ಕುರೇರ, ಮುಖ್ಯಶಿಕ್ಷಕ ಪಿ.ಡಿ. ಕಾಲವಾಡ, ಶಿಣ ಸಂಯೋಜಕ ಆನಂದತೀರ್ಥ ಜೋಶಿ ಇತರರು ಇದ್ದರು.