ಜಿಲ್ಲೆ

ಹಲವು ಕ್ಷೇತ್ರಗಳಲ್ಲಿ ಡಾ.ಕೋರೆ ಸೇವೆ ಅಪಾರ

ಬೆಳಗಾವಿ: ಬೆಳಗಾವಿ ಜಿಲ್ಲೆ ವಿಶ್ವದಾದ್ಯಂತ ಹೆಸರುವಾಸಿಯಾಗಲು ಕೆಎಲ್​ಇ ಸಂಸ್ಥೆ ಹಾಗೂ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಕೊಡುಗೆ ಅಪಾರವಾಗಿದೆ ಎಂದು
ಯಳ್ಳೂರ ರಸ್ತೆಯ ಕೆಎಲ್​ಇ ಶತಮಾನೋತ್ಸವ ಚಾರಿಟೇಬಲ್​ ಆಸ್ಪತ್ರೆಯ ನಿರ್ದೇಶಕ ಡಾ. ಎಸ್​.ಸಿ. ಧಾರವಾಡ ಹೇಳಿದರು.

ಡಾ. ಪ್ರಭಾಕರ ಕೋರೆ ಅವರ ಜನ್ಮದಿನದ ಅಂಗವಾಗಿ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಕೆಎಲ್​ಇ ಸಂಸ್ಥೆಯು ಶಿಕ್ಷಣ ೇತ್ರ, ವೈದ್ಯಕಿಯ ೇತ್ರ ಹಾಗೂ ಸಾರ್ವಜನಿಕ ಉದ್ದಿಮೆ ಹೀಗೆ ಹಲವಾರು ೇತ್ರಗಳಲ್ಲಿ ಭಾರತವಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಹೆಸರುವಾಸಿಯಾಗುವುದಕ್ಕೆ ಪ್ರಮುಖ ಪಾತ್ರ ವಹಿಸಿದ ಡಾ. ಪ್ರಭಾಕರ ಕೊರೆ ಅವರು ಶತಾಯುಷಿಗಳಾಗಲಿ ಎಂದು ಹಾರೈಸಿದರು.

ಕೆಎಲ್​ಇ ಹೋಮಿಯೋಪಥಿಕ್​ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎ.ಉಡಚರನಕರ ಮಾತನಾಡಿ, ರಕ್ತ ಶರೀದ ಮುಖ್ಯ ಅಂಗ. ಅದನ್ನು ಬೇರಾವ ಮಾರ್ಗಗಳಿಂದಲೂ ಉತ್ಪಾದಿಸಲು ಸಾಧ್ಯವಿಲ್ಲ. ಡಾ. ಪ್ರಭಾಕರ ಕೋರೆ ಜನ್ಮದಿನದ ನಿಮಿತ್ತ ರಕ್ತ ದಾನಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.

ಆಸ್ಪತ್ರೆಯ ಸಿಬ್ಬಂದಿ, ಕೆಎಲ್​ಇ ಹೋಮಿಯೋಪಥಿಕ್​ ಕಾಲೇಜಿನ ವಿಧ್ಯಾರ್ಥಿಗಳು ಮತ್ತು ಕೆಎಲ್​ಇ ನರ್ಸಿಂಗ್​ ಕಾಲೇಜಿನ ವಿಧ್ಯಾರ್ಥಿಗಳು ರಕ್ತದಾನ ಮಾಡಿದರು. ಕೆಎಲ್​ಇ ಶತಮಾನೋತ್ಸವ ಚಾರಿಟೇಬಲ್​ ಆಸ್ಪತ್ರೆಯ ರಕ್ತ ಭಂಡಾರದ ಅಧಿಕಾರಿ ಡಾ.ಅಶೋಕ ಅಲತಗಿ, ಯುಎಸ್​ಎಂ. ಕೆಎಲ್​ಇ ಹಿರಿಯ ವೈದ್ಯ ಡಾ.ಅಶೋಕ ಪಾಂಗಿ, ಕೆಎಲ್​ಇ ನರ್ಸಿಂಗ್​ ಕಾಲೇಜಿನ ಪ್ರಾಚಾರ್ಯ ವಿಕ್ರಾಂತ ನೇಸರಿ ಇದ್ದರು. 28 ಯೂನಿಟ್​ ರಕ್ತ ಸಂಗ್ರಹಿಸಲಾಯಿತು.

ಜತೆಗೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಆಸ್ಪತ್ರೆ ಹಾಗೂ ಧನಶ್ರೀ ಕರಣಸಿಂಗ್​ ಸರದೇಸಾಯಿ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು. 300ರಕ್ಕೂ ಅಧಿಕ ಜನರಿಗೆ ಆರೋಗ್ಯ ತಪಾಸಣೆ ಮಾಡಿ, ಉಚಿತವಾಗಿ ಔಷಧ ವಿತರಿಸಲಾಯಿತು. ಡಾ. ಸಿ.ಎನ್​.ತುಗಶೆಟ್ಟಿ, ಡಾ.ಸಿ.ಎನ್​ ತುಗಶೆಟ್ಟಿ, ಡಾ.ವಿನಾಯಕ ಇಂಗಳಗಿ, ಡಾ.ಜಗದೀಶ ಸುರಣ್ಣವರ, ಡಾ. ವಿಶಾಲ ಕಾಖಂಡಕಿ, ಡಾ. ಅಮೃತಾ ಸಾಲಕರ, ಡಾ.ಬಸವರಾಜ ಕುಡಸೊಮಣ್ಣವರ, ಆಸ್ಪತ್ರಯ ಸಿಬ್ಬಂದಿ ಇದ್ದರು.