ಹೊಳೆನರಸೀಪುರ : ತಾಲೂಕಿನ ಹಳ್ಳಿಮೈಸೂರಿನ ನೀರಾವರಿ ಇಲಾಖೆಯ ಪ್ರವಾಸಿಮಂದಿರ ಹಲವಾರು ವರ್ಷಗಳಿಂದ ಶಿಥಿಲಗೊಂಡಿದ್ದ ಹಿನ್ನಲೆಯಲ್ಲಿ ಅದನ್ನು ದುರಸ್ತಿ ಗೊಳಿಸಿ ಪುನಃ ಉಪಯೋಗಕ್ಕೆ ತರುವ ಸಲುವಾಗಿ ಸುಮಾರು 15 ಲಕ್ಷ ರೂಪಾಯಿಗಳನ್ನು ಮಂಜುರಾತಿ ನೀಡಲಾಗಿದೆ ಎಂದು ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.
ಇಂದು ಹಳ್ಳಿಮೈಸೂರು ಹೋಬಳಿಯ ಮೂರು ಗ್ರಾಮಗಳಲ್ಲಿ ಹಲವು ಅಭಿವದ್ದಿ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಲಾಗುತ್ತಿದೆ. ಈ ಅಭಿವೃದ್ದಿ ಕಾಮಗಾರಿಗೆ ಸುಮಾರು 65 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಈ ಭಾಗದ ಜನರು ಪಡೆಯಬೇಕೆಂದರು.
ಹಳ್ಳಿಮೈಸೂರು ಗ್ರಾಮದಲ್ಲಿನ ನೀರಾವರಿ ಇಲಾಖೆಗೆ ಸೇರಿದ ಪ್ರವಾಸಿ ಮಂದಿರದ ದುರಸ್ತಿ ಮತ್ತು ಪದವಿಪೂರ್ವ ಕಾಲೇಜಿನ ಮುಂಭಾಗದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 4 ಲಕ್ಷ ವೆಚ್ಚದಲ್ಲಿ ಬಸ್ ತಂಗದಾಣಕ್ಕೆ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿ ಇದರ ಜೊತೆಯಲ್ಲಿ ತಾಲೂಕಿನ ದೊಡ್ಡಳ್ಳಿ ಸಮೀಪದ ಮರಹಳ್ಳಿ ಗ್ರಾಮದ ದೊಡ್ಡಳ್ಳಿ ಆನೇಕನ್ನಂಬಾಡಿ ರಸ್ತೆಗೆ 15 , ಮರಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತ ವರ್ಗದ ಕಾಂಕ್ರಿಟ್ ರಸ್ತೆಗೆ 10 ಲಕ್ಷ ಕಾಮಗಾರಿಗೆ ಇಂದು ತಾವು ಗುದ್ದಲಿಪೂಜೆ ನೇರವೇರಿಸಲಾಗುತ್ತಿದೆ, ಇದರೊಂದಿಗೆ ನಗರನಹಳ್ಳಿ ಪಂಚಾಯಿತಿಗೆ ಸೇರಿದ ಮಲುಗನಹಳ್ಳಿ ರಸ್ತೆ ಅಭಿವೃದ್ದಿ 10 ಲಕ್ಷ ಮಲುಗನಹಳ್ಳಿ ಗ್ರಾಮದಲ್ಲಿನ ಅಂಗನವಾಡಿ ಕಾಂಪೌoಡ್ ನಿರ್ಮಾಣಕ್ಕೆ ಚಾಲನೆ ನೀಡುತ್ತಿರುವುದಾಗಿ ತಿಳಿಸಿದರು.
ಬರುವ ಶುಕ್ರವಾರ ಡಿಸೆಂಬರ್ 9 ರಂದು ತಾಲೂಕಿನ ಹಳ್ಳಿಮೈಸೂರು ಹೋಳಿ ಅನೇಕನ್ನಾಂಬಾಡಿ ಹಾಗು ಇತರೆ 55 ಗ್ರಾಮಗಳಿಗೆ ಹೇಮಾವತಿ ನದಿಯಿಂದ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಗೆ 30 ಕೋಟಿ ಯೋಜನೆಯಡಿಯಲ್ಲಿ ಬಹುಗ್ರಾಮ ನೀರು ಸರಬರಾಜು ನೀಡುವ ಸಲುವಾಗಿ ಶಂಕುಸ್ಥಾಪನೆ ನೇರವೇರಿಸಲಾಗುತ್ತಿದೆ. ಈ ಯೋಜನೆ ಅನುಷ್ಟಾನಗೊಳ್ಳುತ್ತಿರುವುದರಿಂದ ಆನೆಕನ್ನಾಂಬಾಡಿ ಗ್ರಾಮ ಪಂಚಾಯಿತಿಗೆ ಸೇರಿದ ಆನೆಕನ್ನಾಂಬಾಡಿ, ದಾಸೇಗೌಡನಕೊಪ್ಪಲು, ಈರೇಗೌಡನಹಕೊಪ್ಪಲು, ನಂಜೇಗೌಡನ ಕೊಪ್ಪಲು, ದೇವರಗುಡ್ಡೇನಹಳ್ಳಿ, ಹೊನ್ನೇನಹಳ್ಳಿ , ಮಾಕಬಳ್ಳಿ ಹಾಗು ಮುಕ್ಕನಹಳ್ಳಿ, ದೊಡ್ಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ದೊಡ್ಡಳ್ಳಿ, ದೊಡ್ಡಳ್ಳಿಕೊಪ್ಪಲು, ಕೂಳಿನಕೆರೆಕೊಪ್ಪಲು ಮಂಟಿಕೊಪ್ಪಲು, ಸಂತೇಮೈದಾನ, ದೋಣನಘಟ್ಟ÷್ಟ, ಮರಹಳ್ಳಿ, ಶಂಕರಶೆಟ್ಟಿಹಳ್ಳಿ, ಯಡೇಗೌಡನಹಳ್ಳಿ, ದೊಡ್ಡಕಾಡನೂರು ಗ್ರಾಮ ಪಂಚಾಯಿತಿಗೆ ಸೇರಿದ ಆಲಗೌಡನಹಳ್ಳಿ, ಅಣ್ಣೇಚಾಕೇನಹಳ್ಳಿ, ಬಾಚನಹಳ್ಳಿ, ಬಾಚನಹಳ್ಳಿಕೊಪ್ಪಲು, ಬೆಟ್ಟದಗುಳ್ಳದ ಪುರ, ದಾಳಗೌಡನಹಳ್ಳಿ, ಜವರಿಕೊಪ್ಪಲು, ಮೂಡಲಕೊಪ್ಪಲು, ಬಂಟರತಳಾಲು, ಸಿ.ಹಿಂದಲಹಳ್ಳಿ, ಚಿಕ್ಕಕಾಡನೂರು, ಚಿಕ್ಕನಕೊಪ್ಪಲು, ದೊಡ್ಡಕಾಡನೂರು, ಗುಳ್ಳದಪುರ, ಮಲ್ಲೇನಹಳ್ಳಿ, ನಗರನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗಂಜಿಕುಪ್ಪಳ್ಳಿ, ಹಿರಿತಳಾಲು, ಹಿರತಳಾಲು ಹರಿಜನ ಕಾಲೋನಿ, ಕಬ್ಬೂರು, ಕೋಟಿಗನಹೊಸೂರು, ಮಲುಗನಹಳ್ಳಿ, ಮೂಡಲಮಾಯಿಗೌಡನಹಳ್ಳಿ, ನಗರನಹಳ್ಳಿ, ನಗರನಹಳ್ಳಿಕೊಪ್ಪಲು, ನೆಗ್ಗಲಹಳ್ಳಿ, ಹೊಸಕೊಪ್ಪಲು, ಕುಣಿಯನಹಳ್ಳಿ, ರಂಗೇನಹಳ್ಳಿ, ರಾಗಿಹಳ್ಳಿಕಾವಲು ಶ್ರವಣೂರು ಗ್ರಾಮ ಪಂಚಾಯಿತಿಗೆ ಸೇರಿದ ಅರೇಕೊಪ್ಪಲು, ಹೊಸಕೊಪ್ಪಲು, ಕೆರೆಮೇಗಲಕೊಪ್ಪಲು , ಮೂಡಲಕೊಪ್ಪಲು ಗಳಿಗೆ ಶಾಶ್ವತ ಕುಡಿಯವು ನೀರು ನಲ್ಲಿ ಸಂಪರ್ಕ ನೀಡುವುದರಿಂದ 33320 ಮಂದಿ ಈ ಯೋಜನೆಯಲ್ಲಿ ಫಲಾನುಭವಿಗಳಾಗಲಿದ್ದಾರೆ ಎಂದು ಮಾಹಿತಿ ನೀಡಿ ಇದರ ಯೋಜನಾ ಸಾಮಾರ್ಥ್ಯ 2.70 ಎಂ ಎಲ್ ಡಿ ಆಗಿದೆ. ಈ 55 ಗ್ರಾಮಗಳಿಗೂ ನೀಡುವ ಕುಡಿಯುವ ನೀರಿನ ಶುದ್ದಿಕರಣ ಘಟಕವನ್ನು ತಾಲೂಕಿನ ನೆಗ್ಗಲಹಳ್ಳಿ ಬಾರೆ ಗ್ರಾಮದ ಬಳಿ ಸಿದ್ದವಾಗಿ ನೀರು ಹರಿಸಲಾಗುವುದೆಂದು ಮಾಹಿತಿ ನೀಡಿ ಈ ಕುಡಿಯುವ ಶಾಶ್ವತ ನೀರು ಯೋಜನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ತೊಂದರೆ ಶಾಶ್ವತವಾಗಿ ಬಗೆಹರಿಯಲಿದೆ ಎಂಬ ಆಶಾಭಾವನೆ ವ್ಯಕ್ತ ಪಡಿಸಿದರು.
ಶಾಸಕ ಎ.ಟಿ.ರಾಮಸ್ವಾಮಿ ಅವರೊಂದಿಗೆ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ಬಾಬು , ಕುಡಿಯುವ ನೀರು ವಿತರಣೆಯ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಪ್ರಶಾಂತ್, ಯೋಗೇಶ್ ಗೌಡ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್.ಪ್ರಭುಶಂಕರ್ ಸೇರಿದಂತೆ ಹಳ್ಳಿಮೈಸೂರು ಗ್ರಾಮದ ಜೆಡಿಎಸ್ ಮುಖಂಡರುಗಳು ಹಾಜರಿದ್ದರು.