ಜಿಲ್ಲೆ

ಹಲಗೇರಿ ಗ್ರಾಪಂ ಅಧ್ಯಕ್ಷರಾಗಿ ಯಲ್ಲಪ್ಪ‌ ಆಯ್ಕೆ

ಕೊಪ್ಪಳ: ಹಲಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಯಲ್ಲಪ್ಪ ಓಜನಹಳ್ಳಿ ಮತ್ತು ಉಪಾಧ್ಯಕ್ಷರಾಗಿ ಪಾರವ್ವ ಬಸಪ್ಪ ಗುಡ್ಲಾನೂರು ಅವರನ್ನು ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತಾಲೂಕಿನ ಹಲಗೇರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 18 ಸದಸ್ಯ ಬಲದ ಗ್ರಾಮ ಪಂಚಾಯತಿನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಹನುಮಂತಪ್ಪ ಎಚ್. ಅವರು ಇಬ್ಬರ ಹೆಸರನ್ನು ಘೋಷಿಸಿದರು. ನೂತನ ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ ಹಾಗೂ ಉಪಾಧ್ಯಕ್ಷೆ ಪಾರವ್ವ ಬಸಪ್ಪ ಗುಡ್ಲಾನೂರು ಅವರಿಗೆ ಗ್ರಾಮಸ್ಥರು, ಬೆಂಬಲಿಗರು ಹೂಮಾಲೆ ಹಾಕಿ, ಅಭಿನಂದಿಸಿ, ಶುಭ ಕೋರಿದರು.

ಪಟಾಕಿ ಸಿಡಿಸಿ ಸಂಭ್ರಮ: ಹಲಗೇರಿ ಗ್ರಾಮ ಪಂಚಾಯತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಯಲ್ಲಪ್ಪ ಓಜನಹಳ್ಳಿ ಹಾಗೂ ಉಪಾಧ್ಯಕ್ಷೆಯಾಗಿ ಪಾರವ್ವ ಗುಡ್ಲಾನೂರು ಹೆಸರನ್ನು ಘೋಷಣೆ ಮಾಡುತ್ತಿದಂತೆ ಬೆಂಬಲಿಗರು ಮತ್ತು ಯುವಕರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ನಂತರ ನೂತನ ಅಧ್ಯಕ್ಷರು ಗ್ರಾಮದ ಶಾಂಭವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಹಿರಿಯ ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ್, ಶಂಕ್ರಪ್ಪ ಅಂಗಡಿ, ಶರಣಪ್ಪ ಬಿನ್ನಾಳ, ಶಾಂತಣ್ಣ ಪೊಲೀಸ್ ಪಾಟೀಲ್, ದೇವಪ್ಪ ನಾಗರಳ್ಳಿ, ಕಂದಾಯ ನೀರಿಕ್ಷಕ ಮಂಜುನಾಥ ಮ್ಯಾಗಳಮನಿ, ಗ್ರಾಪಂ ಸದಸ್ಯರಾದ ಜಗದೀಶ ಓಜನಹಳ್ಳಿ, ಕಳಕನಗೌಡ ಪಾಟೀಲ್, ನಾಗರಾಜ ಪಾಲನಕರ್, ಮಲ್ಲಿಕಾರ್ಜುನ ಮಡಿವಾಳರ, ಸುಭಾಷ್ ಹೂಗಾರ, ಗಂಗವ್ವ ಕೆ., ಮ್ಯಾಗಳಮನಿ, ಶಾಂತಮ್ಮ ಬಿನ್ನಾಳ, ಉಮಾದೇವಿ ಸಿಂದೋಗಿ, ಶರಣಮ್ಮ ತಳವಾರ, ತಿಮ್ಮನಗೌಡ, ಪ್ರಕಾಶ ಚನ್ನನಗೌಡ್ರ, ಮುಖಂಡರಾದ ವೀರಣ್ಣ ಕಂಬಳಿ, ಹನುಮಂತ ಹಳ್ಳಿಕೇರಿ, ಎನ್.ಎಂ. ದೊಡ್ಡಮನಿ, ವರಣು ಕುಮಾರ್ ನಿಟ್ಟಾಲಿ, ದೇವಪ್ಪ ವದ್ನಾಳ, ಅಶೋಕ ಅಬ್ಬಿಗೇರಿ, ಭೀಮಣ್ಣ ಗುಡ್ಲಾನೂರು, ರವಿ ಹುಡೇದ ಸೇರಿದಂತೆ ಇತರರು ಉಪಸ್ಥಿತರಿದ್ದರು.