ಹರಪನಹಳ್ಳಿ: ಪಟ್ಟಣದ ಐಬಿ ವೃತ್ತದ ಬಳಿ ಸ್ನೇಹ ಸಿಂಚನ ಫ್ರೆಂಡ್ಸ್, ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಭಾನುವಾರ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
7 ರಿಂದ 14 ವರ್ಷದವರಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದ್ದು, 36 ಜನರು ಪಾಲ್ಗೊಂಡಿದ್ದರು. ಪ್ರಥಮ ಬಹುಮಾನ 2 ಸಾವಿರ ರೂ., ದ್ವಿತೀಯ ಬಹುಮಾನ 1500 ರೂ., ತೃತೀಯ ಬಹುಮಾನ 1 ಸಾವಿರ ರೂ. ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಬೆಳಗ್ಗೆ ಸೈಕಲ್ ಜಾಥಾ ನಡೆಯಿತು. ಸಂಜೆ ಗಣೇಶ ಶೋಭಾಯಾತ್ರೆ ನಡೆಯಿತು.