ಜಿಲ್ಲೆ

ಹರದನಹಳ್ಳಿಯಲ್ಲಿ ಶ್ರೀಓಂಶಕ್ತಿ ದೇವಿ ಭಾವಚಿತ್ರ ಮೆರವಣಿಗೆ

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶ್ರೀ ಓಂ ಶಕ್ತಿ ದೇವಿಯ ಭಾವಚಿತ್ರ ಮೆರವಣಿಗೆಯನ್ನು ಶುಕ್ರವಾರ ಅದ್ಧೂರಿಯಾಗಿ ನೆರವೇರಿಸಲಾಯಿತು.

ಶ್ರೀ ಓಂ ಶಕ್ತಿ ದೇವಿಯ ಭಾವಚಿತ್ರಕ್ಕೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಓಂ ಶಕ್ತಿ ದೇವಿಯ ಭಾವಚಿತ್ರದ ಮೆರವಣಿಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಈ ವೇಳೆ ಗ್ರಾಮಸ್ಥರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಮೆರವಣಿಗೆಯಲ್ಲಿ ಓಂ ಶಕ್ತಿಗೆ ತೆರಳುವ ಮಹಿಳೆಯರು ಮತ್ತು ಮಕ್ಕಳು ಕೆಂಪು ಉಡುಗೆ ತೊಟ್ಟು ಸಾಗಿದರು. ಮೆರವಣಿಗೆ ಮುಕ್ತಾಯವಾದ ಬಳಿಕ ಗ್ರಾಮಸ್ಥರಿಗೆ ಅಚ್ಚುಕಟ್ಟಾಗಿ ಪ್ರಸಾದ ವಿನಿಯೋಗ ಮಾಡಲಾಯಿತು.

ಬಳಿಕ 12 ಬಸ್ಸುಗಳು ಮತ್ತು 2 ಕಾರುಗಳಲ್ಲಿ ಅಂದಾಜು 750-800 ಜನರು ಓಂ ಶಕ್ತಿಗೆ ತೆರಳಿದರು. ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು, ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.