ಜಿಲ್ಲೆ

ಹರದನಹಳ್ಳಿ ವಿದ್ಯಾರ್ಥಿಗಳು ಚಾಂಪಿಯನ್

ಸಾಲಿಗ್ರಾಮ: ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ 2023-24ನೇ ಸಾಲಿನ ಶ್ರೀ ಭೈರವೇಶ್ವರ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಹರದನಹಳ್ಳಿ ಪ್ರೌಢಶಾಲೆಯ ಕ್ರೀಡಾಪಟುಗಳು ಚಾಂಪಿಯನ್ ಪ್ರಶಸ್ತಿ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಸೋಮವಾರ ಹರದನಹಳ್ಳಿ ಶಾಲೆಯಲ್ಲಿ ಕ್ರೀಡಾಪಟುಗಳನ್ನು ಶಿಕ್ಷಕರು ಮತ್ತು ಗ್ರಾಮಸ್ಥರು ಅಭಿನಂದಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಪ್ರದೀಪ್, ಮುಖ್ಯಶಿಕ್ಷಕ ಮಂಜುನಾಥ್, ದೈಹಿಕ ಶಿಕ್ಷಣ ಶಿಕ್ಷಕ ಹುಸೇನ್ ಭಾಷಾ, ಸಹಶಿಕ್ಷಕರಾದ ಜ್ಯೋತಿ, ರೂಪಾ, ಮಂಜುನಾಥ್, ಎಸ್‌ಡಿಎಂಸಿ ಸದಸ್ಯ ಹನುಮಂತನಾಯಕ, ಜಗದೀಶ್ ಇತರರು ಇದ್ದರು.

ವಿವಿಧ ವಿಭಾಗದಲ್ಲಿ ಸಾಧನೆ: ಬಾಲಕರ ಖೋಖೋ ಸ್ಪರ್ಧೆಯಲ್ಲಿ ಶಾಲೆಯ ಬಾಲಕರು, ಬಾಲಕಿರ ತಂಡ ಪ್ರಥಮ, 800 ಮೀ. ಓಟದಲ್ಲಿ ವರಲಕ್ಷ್ಮೀ ಪ್ರಥಮ ಸ್ಥಾನ, 400 ಮೀ. ಓಟದಲ್ಲಿ ಅರುಣ್ ಪ್ರಥಮ, 200 ಮೀ. ಓಟದಲ್ಲಿ ಸಿಂಚನಾ ದ್ವಿತೀಯ, 300 ಮೀ. ಓಟದಲ್ಲಿ ಸಚಿನ್ ತೃತೀಯ, 200 ಮೀ. ಓಟದಲ್ಲಿ ಕೀರ್ತಿ ತೃತೀಯ, 100 ಮೀ. ಓಟದಲ್ಲಿ ದೀಪಿಕಾ ತೃತೀಯ ಸ್ಥಾನ ಗಳಿಸಿದ್ದಾರೆ. ಜಾವೆಲಿನ್ ಸ್ಪರ್ಧೆಯಲ್ಲಿ ಕೀರ್ತಿ ಪ್ರಥಮ, ಅರ್ಪಿತಾ ದ್ವಿತೀಯ ಸ್ಥಾನ. ಗುಂಡು ಎಸೆತ ಸ್ಪರ್ಧೆಯಲ್ಲಿ ಅರುಣ್ ದ್ವಿತೀಯ, ತಟ್ಟೆ ಎಸೆತ, ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಒಟ್ಟಾರೇ ವಿದ್ಯಾರ್ಥಿಗಳು ಚಾಂಪಿನ ಪ್ರಶಸ್ತಿ ಪಡೆಯುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.