ಸಕಲೇಶಪುರ: ಪಟ್ಟಣದ ಗುರುವೇಗೌಡ ಕಲ್ಯಾಣಮಂಟಪದ ಅವರಣದಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸಿದ್ದ ರಾಮಧೂತ ಗಣೇಶನನ್ನು ಶುಕ್ರವಾರ ಆದ್ದೂರಿಯಾಗಿ ಹೇಮಾವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಇದೆ ಮೊದಲ ಬಾರಿಗೆ ಪ್ರತಿಷ್ಠಾಪಿಸಲಾಗಿದ್ದ ರಾಮಧೂತ ಗಣಪತಿ ವಿಸರ್ಜನೆ ಅಂಗವಾಗಿ ಹೋಮ-ಹವನ ನಡೆಸುವ ಮೂಲಕ ವಿಸರ್ಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಯಕರ್ತರು ಸಾವಿರಾರು ಜನರಿಗೆ ಅನ್ನಧಾನ ಹಮ್ಮಿಕೊಂಡಿದ್ದರು. ನಂತರ ನಡೆದ ಶೋಭಾ ಯಾತ್ರೆ ಎಸ್.ಪಿ ರಸ್ತೆ ಮೂಲಕ ಸಾಗಿ ಮಂಜ್ರಾಭಾದ್ ಕ್ಲಬ್ ಮೂಲಕ ತೆರಳಿ ಮುಖ್ಯರಸ್ತೆಯ ಹೇಮಾವತಿ ನದಿಯವರಗೆ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ನಂತರ ಹೇಮಾವತಿನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಹಿಂದೂಪರ ಸಂಘಟನೆಯ ಮುಖಂಡರಾದ ರಘು, ಗುರು, ಶಿವ, ಧರ್ಮೇಶ್, ವಿಜಯ್ ಇತರರು ಇದ್ದರು.