ಮಸ್ಕಿ ತಹಸಿಲ್ ಕಚೇರಿಯಲ್ಲಿ ತಹಸೀಲ್ದಾರ್ ಅರಮನೆ ಸುಧಾ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ದಿನ ಪೂರ್ವಭಾವಿ ಸಭೆ ನಡೆಯಿತು. ಸಿಪಿಐ ಬಾಲಚಂದ್ರ ಡಿ. ಲಕ್ಕಂ, ಪ್ರಭಾರ ಬಿಇಒ ಬಸಪ್ಪ ತನಿಖೆದಾರ, ಪುರಸಭೆ ಮುಖ್ಯಾಧಿಖಾರಿ ನರಸರಡ್ಡಿ, ಪಿಎಸ್‌ಐ ಮಣಿಕಂಠ, ನೀರಾವರಿ ಇಲಾಖೆ ಎಇಇ ದಾವೂದ್, ವೈದ್ಯಾಧಿಕಾರಿ ಡಾ.ಮೌನೇಶ ಇದ್ದರು. 
ಜಿಲ್ಲೆ

ಹಬ್ಬದಂತೆ ಸ್ವಾತಂತ್ರೃ ದಿನ ಆಚರಿಸಿ, ಅಧಿಕಾರಿಗಳಿಗೆ ತಹಸೀಲ್ದಾರ್ ಅರಮನೆ ಸುಧಾ ಸೂಚನೆ

ಮಸ್ಕಿ: ಸ್ವಾತಂತ್ರ್ಯ ದಿನವನ್ನು ಮನೆಯ ಹಬ್ಬದಂತೆ ಆಚರಿಸುವುದಕ್ಕಾಗಿ ತಾಲೂಕು ಆಡಳಿತದಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ತಹಸೀಲ್ದಾರ್ ಅರಮನೆ ಸುಧಾ ತಿಳಿಸಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೊೃೀತ್ಸವ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಆ.15ರ ಧ್ವಜಾರೋಹಣದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಉಪಸ್ಥಿತರಿರಬೇಕು. ಸ್ವಾಂತಂತ್ರೃದಿನವನ್ನು ಹಬ್ಬದಂತೆ ಆಚರಿಸಲು ಎಲ್ಲ ಸಿದ್ಧತೆ ಕೈಗೊಳ್ಳಬೇಕೆಂದು ತಿಳಿಸಿದರು.

ತಾಲೂಕು ಆಡಳಿತದಿಂದ ಕೇಂದ್ರ ಶಾಲೆಯ ಆವರಣದಲ್ಲಿ ಬೆಳಗ್ಗೆ 9ಕ್ಕೆ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಲಾಗುವುದು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಸಿಪಿಐ ಬಾಲಚಂದ್ರಡಿ. ಲಕ್ಕಂ, ಪ್ರಭಾರ ಬಿಇಒ ಬಸಪ್ಪ ತನಿಖೆದಾರ, ಪುರಸಭೆ ಮುಖ್ಯಾಧಿಖಾರಿ ನರಸರಡ್ಡಿ, ಪಿಎಸ್‌ಐ ಮಣಿಕಂಠ, ನೀರಾವರಿ ಇಲಾಖೆ ಎಇಇ ದಾವೂದ್, ವೈದ್ಯಾಧಿಕಾರಿ ಡಾ.ಮೌನೇಶ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘಟನೆಗಳ ಅಧ್ಯಕ್ಷರು ಹಾಜರಿದ್ದರು.