ಕೊಡೇಕಲ್: ಹಬ್ಬ-ಹರಿದಿನಗಳು ಸಂಬAಧಗಳು ಬೆಸೆಯುವ ಕೊಂಡಿಯಾಗಿವೆ ಎಂದು ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಹೇಳಿದರು.
ರಾಜನಕೊಳೂರ ಗ್ರಾಮದ ಮಲ್ಲಯ್ಯನ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ದಸರಾ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಬ್ಬಗಳು ಸಾಂಸ್ಕೃತಿಕತೆಯ ಪ್ರತೀಕವಾಗಿದ್ದು, ಕುಟುಂಬಗಳನ್ನು ಒಂದಾಗಿ ಬೆಸಯುವ ಮಾರ್ಗಗಳಾಗಿವೆ. ಹೀಗಾಗಿ ಹಬ್ಬ, ಜಾತ್ರೆಗಳು ಆಧುನಿಕ ಯುಗದಲ್ಲಿ ಅನಿವರ‍್ಯವಾಗಿವೆ ಎಂದರು.
ನಮ್ಮ ಪೂರ್ವಿಕರು ಬಳುವಳಿಯಾಗಿ ನೀಡಿರುವ ಹಬ್ಬ, ಜಾತ್ರೆ, ಉತ್ಸವ ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ವೈಚಾರಿಕ ಮನೋಭಾವ, ಧರ್ಮಶ್ರೇಷ್ಟತೆ, ಸಾರ ತತ್ವಗಳನ್ನು ಮುಂದಿನ ಮಕ್ಕಳಿಗೆ ತಿಳಿಸಲು ಹಬ್ಬಗಳು ದಾರಿ ದೀಪಗಳಾಗಿವೆ. ನಾವು ನಮ್ಮ ಸತಾನತನ ಧರ್ಮ, ಸಂಪ್ರದಾಯ ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಕೇವಲ ಮಕ್ಕಳನ್ನು ಹೆತ್ತು ತಾಯಿ ಎನಿಸಿಕೊಳ್ಳುವುದು ಮುಖ್ಯವಲ್ಲ. ಹೆತ್ತ ಮಕ್ಕಳಿಗೆ ಸರಿಯಾದ ಆಚಾರ, ವಿಚಾರ ಸಂಸ್ಕಾರ, ದೇಶದ ಸಂಸ್ಕೃತಿ ಬಗ್ಗೆ ತಿಳಿಸುವುದು ಬಹಳ ಮುಖ್ಯ. ನಮ್ಮ ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾಗಿದೆ. ವಿದೇಶಿಯರು ಕೂಡ ಈ ಮಣ್ಣಿನ ಆಚಾರ ವಿಚಾರಗಳಿಗೆ ಆಕರ್ಷಿತರಾಗಿ ಬದುಕಿನಲ್ಲಿ ನೆಮ್ಮದಿ ಕಾಣಲು ಹವಣಿಸುತ್ತಿದ್ದಾರೆ. ಆದರೆ ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಕೆ ಮಾರುಹೋಗುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯಾವುತ್ತಿಗೂ ಹೆಣ್ಣು ಮಕ್ಕಳ ಕಣ್ಣಲ್ಲಿ ನೀರು ತರಿಸುವಂತಹ ಕೆಲಸ ಮಾಡಬೇಡಿ. ಮನೆಯ ಹೆಣ್ಣುಮಕ್ಕಳು ಮನೆಯ ದೀಪವಿದ್ದಂತೆ ಅವರ ಕಣ್ಣುಗಳಲ್ಲಿ ನೀರು ತರಿಸಿದರೆ ನಮ್ಮ ಮನೆಯ ದೀಪವೇ ನಂದಿಹೋಗುತ್ತದೆ ಎಂದರು.
ನಿವೃತ್ತ ಉಪನ್ಯಾಸಕ ಭೀಮನಗೌಡ ಗುಳಬಾಳ ಮಾತನಾಡಿದರು. ಗ್ರಾಮದಲ್ಲಿ ಜರುಗಿದ ದಸರಾ ಸಾಂಸ್ಕೃತಿಕ ಉತ್ಸವ ಕರ‍್ಯಕ್ರಮದಲ್ಲಿ ಧಾರವಾಡದ ರತಿಕಾ ನೃತ್ಯ ನಿಕೇತನ ಕಲಾ ತಂಡದವರು ನಡೆಸಿಕೊಟ್ಟ ವಿವಿಧ ಸಾಂಸ್ಕೃತೀಕ ಕರ‍್ಯಕ್ರಮ ಜನಮನಸೂರೆಗೊಂಡಿತು.
ರಾಜನಕೋಳೂರ ಗ್ರಾಮದ ದಸರಾ ಸಾಂಸ್ಕೃತೀಕ ಉತ್ಸವ ಸಮಿತಿ ಸದಸ್ಯರು ಸೇರಿ ಹುಣಸಗಿ, ಬಲಶೆಟ್ಟಿಹಾಳ, ಕಾಮನಟಗಿ, ಕೊಡೇಕಲ್, ತೀರ್ಥ, ಗೆದ್ದಲಮರಿ, ಬೈಲಕುಂಟಿ, ರಾಜವಾಳ, ಕಡದರಾಳ, ಸೇರಿ ಅನೇಕ ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಣೆ ಮಾಡಿ ವಂದಿಸಿದರು.