ಬಾಗಲಕೋಟೆ: ಹಬ್ಬ, ಹರದಿನಗಳು ನಾಡಿನ ಸಂಸ್ಕೃತಿಯ ಅಸ್ಮಿತೆಯ ಪ್ರತೀಕವಾಗಿದ್ದು, ಓಣಂ ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶಿವಾಲಯ ಆವರಣದಲ್ಲಿ ಸೋಮವಾರ ಕೇರಳದ ಸಾಂಪ್ರದಾಯಿಕ ಓಣಂ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಓಣಂ ಹಬ್ಬವು ವಿಶೇಷವಾಗಿ ಕೇರಳದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ, ೧೦ ದಿನಗಳ ಕಾಲ ನಡೆಯುವ ಈ ಹಬ್ಬದಂದು ಭೂಮಿಯ ಮೇಲಿನ ಜನರನ್ನು ಆಶಿರ್ವದಿಸಲು ಪಾತಾಳಲೋಕದಿಂದ ಬಲಿರಾಜನು ಬರುತ್ತಾನೆ ಎಂಬ ನಂಬಿಕೆಯಿದೆ ಎಂದರು.
ಬಿವಿವಿ ಸಂಘದ ನರ್ಸಿಂಗ್ ಕಾಲೇಜುಗಳಲ್ಲಿ ಕೇರಳದ ಸುಮಾರು ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಓಣಂ ಹಬ್ಬದ ಆಚರಣೆಗೆ ಸಮಯದ ಅಭಾವದಿಂದ ಈ ವಿದ್ಯಾರ್ಥಿಗಳಿಗೆ ಕೇರಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಬಾಗಲಕೋಟೆಯಲ್ಲೆ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಕೇರಳದ ಚಂಡಿ ಮದ್ದಳೆ ತಂಡ, ಬಾಣಸಿಗರ ತಂಡ ಮತ್ತು ಸ್ಥಬ್ದಚಿತ್ರಗಳು ನಮ್ಮ ಮೆಡಿಕಲ್ ಕಾಲೇಜಿಗೆ ಆಗಮಿಸಿ ಓಣಂ ಹಬ್ಬದ ಸಂಭ್ರಮವನ್ನು ಹೆಚ್ಚಿಸಿರುವರು. ಇಂಥ ಆಚರಣೆಗಳ ಮೂಲಕ ಇಂದಿನ ಯುವಪೀಳಿಗೆಗೆ ನಾಡಿನ ಸಂಪ್ರದಾಯ ಮತ್ತು ಸಂಸ್ಕೃತಿ ಪರಿಚಯ ಮಾಡಿಸುವ ಅಗತ್ಯವಿದೆ ಎಂದು ಹೇಳಿದರು.
ಗಮನ ಸೇಳೆದ ಚಂಡಮದ್ದಳೆ ಹಾಗೂ ಕೇರಳದ ವಿಶೇಷ ಖಾದ್ಯ: ಓಣಂ ಆಚರಣೆಯ ಉದ್ಘಾಟನೆಗೆ ಆಗಮಿಸಿದ ಅವರನ್ನು ಕೇರಳದ ಪಾರಂಪರಿಕ ವಾದ್ಯ ಚಂಡಿ ಮದ್ದಳೆ ನುಡಿಸುವುದರ ಮೂಲಕ ಸ್ವಾಗತಿಸಿದ್ದು ಗಮನ ಸೆಳೆಯಿತು. ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಓಣಂ ನೃತ್ಯ ಪ್ರದರ್ಶಿಸಿದರು. ಕಾಲೇಜಿನ ಆವರಣದಲ್ಲಿ ಸ್ಥಬ್ದಚಿತ್ರಗಳು ಮತ್ತು ಚಂಡಿ ಮದ್ದಳೆ ಜೊತೆಗೆ ನೃತ್ಯ ಪ್ರದರ್ಶಿಸಿ, ಕೇರಳದ ೨೪ ತರ ವಿವಿಧ ಓಣಂ ಸದ್ಯ ಖಾದ್ಯಗಳ ಸವದಿ ಸಂತಸಪಟ್ಟರು.
ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷ À ಕುಮಾರಸ್ವಾಮಿ ಹಿರೇಮಠ, ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ಡಾ.ದಿಲೀಪ್ ನಾಟೆಕರ್, ಡಾ.ಜಯಶ್ರೀ ಈಟ್ಟಿ, ಡಾ.ಪ್ರವೀಣ ಪಾಟೀಲ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಽÃಕ್ಷ ಡಾ.ಶ್ರೀರಾಮ ಕೋರಾ ಉಪಸ್ಥಿತರಿದ್ದರು.