ಜಿಲ್ಲೆ

ಹಬ್ಬಗಳಿಂದ ಅಂತರಂಗ, ಬಹಿರಂಗ ಶುದ್ಧಿ

ಚಿತ್ರದುರ್ಗ: ಅಂತರಂಗ-ಬಹಿರಂಗ ಶುದ್ಧಿಗೆ ಹಿರಿಯರು ಹಬ್ಬಗಳ ಆಚರಣೆಗೆ ಮಹತ್ವ ಕೊಟ್ಟಿದ್ದಾರೆ ಎಂದು ಶಿರಸಂಗಿ ಮಠದ ಬಸವ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ನಗರದ ಮುರುಘಾಮಠದ ಶ್ರೀ ಶಾಂತವೀರ ಶ್ರೀಗಳ ಐಕ್ಯ ಮಂಟಪದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಿದ್ದ ಪುಷ್ಪಾರ್ಚನೆ,ದೀಪಾರತಿ ಹಾಗೂ ರಾಜಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನುಡಿಯಲ್ಲಿರುವ ಮಾನವೀಯತೆ, ಅಂತಃಕರಣವನ್ನು ನಡೆಯಲ್ಲೂ ಆಚರಣೆಗೆ ತರಬೇಕಿದೆ ಎಂದರು.

ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಗತ್ತನ್ನು ಉದ್ದರಿಸಲು ಅನೇಕ ದಾರ್ಶನಿಕರು, ಮಹನೀಯರು, ಮಹಾತ್ಮರು ಬಂದು ಹೋಗಿದ್ದಾರೆ. 12ನೇ ಶತಮಾನದ ಬಸವಾದಿ ಶರಣರು, ಮುರುಘಾ ಪರಂಪರೆ ಪೂಜ್ಯರು ಸಮಾಜದ ಸುಧಾರಣೆಗೆ ತಮ್ಮ ಬದುಕನ್ನೇ ಮೀಸಲಿಟ್ಟು ಶ್ರಮಿಸಿದ್ದಾರೆ. ನಾವು ಸದಾ ಒಳ್ಳೆಯದನ್ನು ಮಾಡುವ ಮುಖಾಂತರ ಬಾಳನ್ನು ಹಸನು ಮಾಡಿಕೊಳ್ಳಬೇಕಿದೆ ಎಂದರು.

ಶ್ರೀಮಠದ ಮುರುೇಂದ್ರ ಸ್ವಾಮೀಜಿ ಮಾತನಾಡಿದರು. ದಾಸೋಹ ಸೇವಾರ್ಥಿಗಳಾದ ಕಿರಣ್‌ಕುಮಾರ್, ರಶ್ಮಿ ಕಿರಣ್‌ಕುಮಾರ್, ಕೆಇಬಿ ಷಣ್ಮುಖಪ್ಪ , ಶರಣಯ್ಯ, ಮುರುಗೇಶ್, ವಕೀಲ ಉಮೇಶ್, ಗುತ್ತಿನಾಡು ಪ್ರಕಾಶ್, ನಾಗರಾಜ್ ಸಂಗಮ್, ಹರಗುರು ಚರಮೂರ್ತಿಗಳು ಇದ್ದರು.

ಲಂಕೇಶ್ ದೇವರು ಸ್ವಾಗತಿಸಿ, ಟಿ.ಎನ್.ಲಿಂಗರಾಜು ನಿರೂಪಿಸಿದರು.