ಜಿಲ್ಲೆ

ಹಬೊಹಳ್ಳಿಯಲ್ಲಿ ಮಹಿಳೆಯರ ಓಕುಳಿಯಾಟ

ಹಗರಿಬೊಮ್ಮನಹಳ್ಳಿ: ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಜನರು ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಕೂಡ್ಲಿಗಿ ವೃತ್ತದಲ್ಲಿ ಕಲರ್ಸ್‌ ವಿತ್ ಕಾರಂಜಿ ತಂಡದಿಂದ ಡಿಜೆ ಮೂಲಕ ಹೋಳಿ ಸಂಭ್ರಮ ಆಯೋಜಿಸಲಾಗಿತ್ತು. ತೇರುಬೀದಿ ಮತ್ತು ಹಳೇ ಊರಿನ ಅಶ್ವತ್ಥಕಟ್ಟೆ ಬಳಿ ಸ್ಥಾಪಿಸಿದ್ದ ಕಾಮಣ್ಣನನ್ನು ಗುರುವಾರ ಮಧ್ಯರಾತ್ರಿ ಸುಟ್ಟು ಶುಕ್ರವಾರ ಬೆಳಗ್ಗೆ ಹೋಳಿ ಆಚರಣೆಯಲ್ಲಿ ಜನರು ಪಾಲ್ಗೊಂಡರು. ನೇಕಾರ ಕಾಲನಿಯಲ್ಲಿ ಮಹಿಳೆಯರು ಓಕುಳಿಯಾಟದಲ್ಲಿ ಭಾಗಿಯಾಗಿದ್ದರು. ಜೆ.ಜೆ.ನಗರದಲ್ಲಿ ಚಿಣ್ಣರ ಕಲರವ ಕಂಡುಬಂತು. ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.