ಜಿಲ್ಲೆ

ಹೆಬ್ಬಾರ ವಿರುದ್ಧ ಶಾಸಕ ಭೀಮಣ್ಣ ನಾಯ್ಕ ವಾಗ್ದಾಳಿ

ಶಿರಸಿ: ಯಾವ ಉದ್ದೇಶಕ್ಕಾಗಿ ಶಿವರಾಮ ಹೆಬ್ಬಾರ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ ಎಂಬುದನ್ನು ಜನಸಾಮಾನ್ಯರಿಗೆ ಕಾರ್ಯಕರ್ತರಿಗೆ ತಿಳಿಸಿ ಬರಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ವಾಗ್ದಾಳಿ ನಡೆಸಿದರು.

ಶನಿವಾರ ನಗರದಲ್ಲಿ ಹೇಳಿಕೆ ನೀಡಿರುವ ಭೀಮಣ್ಣ ನಾಯ್ಕ, ಈ ಮೊದಲು ಅಧಿಕಾರಕ್ಕಾಗಿ, ಹಣಕ್ಕಾಗಿ ಬಿಜೆಪಿಗೆ ಓಡಿ ಹೋದವರು ಇವರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದಕ್ಕಾಗಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಯಾವ ಕಾರಣಕ್ಕಾಗಿ ಬರುತ್ತಿದ್ದಾರೆ ಎಂಬುದನ್ನು ಜನಸಾಮಾನ್ಯರಿಗೆ ಹಾಗೂ ಕಾರ್ಯಕರ್ತರಿಗೆ ತಿಳಿಸಿ ಬರಬೇಕು. ಅವರದ್ದೇ ಸರ್ಕಾರವಿದ್ದರೂ ಬನವಾಸಿ ಭಾಗದಲ್ಲಿ ನೀರಿನ ಯೋಜನೆಯನ್ನು ಮುಗಿಸಲು ಸಾಧ್ಯವಾಗಲಿಲ್ಲ.ಅಲ್ಲಿ ಮುಗಿಯಿತು, ಈಗ ಇಲ್ಲಿಗೆ ಬರುತ್ತಿದ್ದಾರೆ. ಈ ತರದ ಬಂಡ ರಾಜಕಾರಣ ಮಾಡುವುದನ್ನು ಬಿಡಲಿ ಎಂದು ಶಿವರಾಮ ಹೆಬ್ಬಾರ ವಿರುದ್ಧ ವಾಗ್ದಾಳಿ ನಡೆಸಿದರು.