ಜಿಲ್ಲೆ

ಹನೂರು ವಲಯದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಕಿರಣ್ ಮಾದರಹಳ್ಳಿ

ಹನೂರು: ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಹನೂರು ಶೈಕ್ಷಣಿಕ ವಲಯದ 9 ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಜಯಗಳಿಸಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಹನೂರಿನ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ವಶಿಷ್ಠ ಗುಂಡು ಎಸೆತದಲ್ಲಿ ಪ್ರಥಮ, ರಾಮಾಪುರ ಜೆಎಸ್‌ಎಸ್ ಶಾಲೆಯ ಕೌಶಿಕ್ ತಟ್ಟೆ ಎಸೆತದಲ್ಲಿ ಪ್ರಥಮ ಹಾಗೂ ಕಾಂಚಳ್ಳಿ ಸರ್ಕಾರಿ ಶಾಲೆಯ ದಯಾ ಸಾಗರ್ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ಮಹದೇಶ್ವರಬೆಟ್ಟದ ಶ್ರೀ ಮಹದೇಶ್ವರ ಶಾಲೆಯ ಆರ್.ರೀನಾ ಪ್ರಥಮ, ಚಂಗಧಾರಹಳ್ಳಿ ಸರ್ಕಾರಿ ಶಾಲೆಯ ಕಾವ್ಯಾ ದ್ವಿತೀಯ, ಉದ್ದ ಜಿಗಿತದಲ್ಲಿ ಜಲ್ಲಿಪಾಳ್ಯ ಆರ್.ಸಿ.ಶಾಲೆಯ ದೀಪಿಕಾ ದ್ವಿತೀಯ, ತಟ್ಟೆ ಎಸೆತದಲ್ಲಿ ಕೌದಳ್ಳಿ ಸಂತ ಅಂತೋಣಿ ಶಾಲೆಯ ಭೂಮಿಕಾ ದ್ವಿತೀಯ, 100 ಮೀನಲ್ಲಿ ಹನೂರಿನ ಕ್ರಿಸ್ತರಾಜ ಶಾಲೆಯ ಹನ್ಸಿಕಾ ದ್ವಿತೀಯ ಸ್ಥಾನ ಹಾಗೂ 4*100 ರಿಲೆಯಲ್ಲಿ ಇದೇ ಶಾಲೆಯ ಹನ್ಸಿಕಾ ತಂಡ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ನ.7 ಮತ್ತು 8ರಂದು ಶಿವಮೊಗ್ಗದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ. ಮಹದೇವ ವಿಜಯವಾಣಿಗೆ ತಿಳಿಸಿದರು.