ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಹನುಮಂತಗೌಡ ಬಸವನಗೌಡ್ರ ಅವರಿಗೆ ಪಿಎಚ್‌ಡಿ ಪದವಿ ನೀಡಿದೆ. ವಿವಿ ಭೌತಶಾಸ್ತ್ರದ ಪ್ರೊ. ಡಾ. ಎಂ.ಜಿ. ಕೊಟ್ರೇಶ್ ಅವರ ಮಾರ್ಗದರ್ಶನದಲ್ಲಿ ‘ಸ್ಪೆಕ್ಟ್ರೋಸ್ಕೋಪಿಕ್ ಇನ್ವೆಸ್ಟೆಗೇಷನ್ ಆಫ್ ಹೈಬ್ರಿಡ್ ನ್ಯಾನೋಸಿಸ್ಟಮ್ಸ್ ಇನ್‌ವ್ಯೆ ಆಫ್ ಡೆವಲಪಿಂಗ್ ಕೆಮಿಕಲ್ ಆಂಡ್ ಬಯೋ ಸೆನ್ಸರ್ಸ್’ ಎಂಬ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.