ಜಿಲ್ಲೆ

ಹನುಮ ಜಯಂತಿ ಯಶಸ್ಸಿಗೆ ಕೃತಜ್ಞತೆ

ಚಾಮರಾಜನಗರ: ಶ್ರೀಆಂಜನೇಯಸ್ವಾಮಿ ಜಯತ್ಯುತ್ಸವ ಸಮಿತಿ ವತಿಯಿಂದ ಡಿ.21 ರಂದು ಆಯೋಜಿಸಿದ್ದ ಹನುಮ ಜಯಂತಿ ಯಶಸ್ಸಿಗೆ ಕಾರಣಕರ್ತರಾದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಜಯತ್ಯುತ್ಸವ ಸಮಿತಿ ಅಧ್ಯಕ್ಷ ಪೃಥ್ವಿರಾಜ್ ತಿಳಿಸಿದರು.

ಶ್ರೀಆಂಜನೇಯಸ್ವಾಮಿ ಜಯತ್ಯುತ್ಸವದ ಭವ್ಯ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ, ಬಹಳ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿತು. ಮೆರವಣಿಗೆಯಲ್ಲಿ ನಗರದ ಎಲ್ಲಾ ಕೋಮಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಟ್ಟರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಗರಸಭೆ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಕೋಮಿನ ಯಜಮಾನರು, ಸಾರ್ವಜನಿಕರು ಹನುಮ ಜಯಂತಿ ಮೆರವಣಿಗೆ ಯಶಸ್ವಿಯಾಗಲು ಕಾರಣಕರ್ತರಾಗಿದ್ದು, ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದ್ದರು. ವಿವಿಧ ಸಂಘಟನೆಗಳು, ಸಂಘ-ಸಂಸ್ಥೆಗಳು ಪದಾಧಿಕಾರಿಗಳಿಗೆ ಹಾಗೂ ಜಯಂತಿ ಯಶಸ್ಸಿಗೆ ಪತ್ಯಕ್ಷವಾಗಿ, ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದರು. ‘

ಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು, ಸಹ ಕಾರ್ಯದರ್ಶಿ ಮಧು, ಉಪಾಧ್ಯಕ್ಷ ಹರ್ಷದ್ ಗೌಡ, ಸಂಚಾಲಕ ಪ್ರವೀಣ್, ಸಮಿತಿಯ ಶಿವು ಹಾಜರಿದ್ದರು.