ಜಿಲ್ಲೆ

ಹನುಮ ಜನಸ್ಥಾನಕ್ಕೆ ಮಾಲಾಧಾರಿಗಳು

ಕಲಬುರಗಿ: ಜೈಶ್ರೀರಾಮ, ಜೈ ಹನುಮಾನ ಜೈ ಘೋಷಣೆಗಳ ಮಧ್ಯೆ ನಗರದ ಗಂಜ್ ಹನುಮಾನ ದೇವಸ್ಥಾನದಿಂದ ನೂರಾರು ಹನುಮ ಭಕ್ತರು ಮಾರುತಿಯ ಜನ್ಮಸ್ಥಾನ ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಗುರುವಾರ ಯಾತ್ರೆ ಆರಂಭಿಸಿದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ೨೫೦ಕ್ಕಿಂತ ಹೆಚ್ಚಿನ ಹನುಮ ಭಕ್ತರು ಮಾಲಾಧಾರಣೆ ಮಾಡಿ, ಭಜನೆ, ಸ್ತುತಿಗಳನ್ನು ಮಾಡುತ್ತ ವಾಹನಗಳಲ್ಲಿ ಅಂಜನಾದ್ರಿ ಬೆಟ್ಟಕ್ಕೆ ತೆರಳಿದರು.

ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಶುಕ್ರವಾರ ರಾಜ್ಯಾದ್ಯಂತ ಲಕ್ಷಾಂತರ ಹನುಮ ಭಕ್ತರು ಮಾಲೆಗಳ ವಿಸರ್ಜನೆ ಮಾಡಲಿದ್ದು, ಉತ್ಸವದಲ್ಲಿ ಚಂದು ಪಾಟೀಲ್ ನೇತೃತ್ವದ ಮಲಾಧಾರಿಗಳ ತಂಡವೂ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿ ಮಾಲೆ ವಿಸರ್ಜನೆ ಮಾಡಲಿದೆ.

ಪ್ರಮುಖರಾದ ಉಮೇಶ ಪಾಟೀಲ್, ಅಶೋಕ ಮಾನ್ಕರ್, ಶಿವಾನಂದ ಪಿಸ್ತಿ, ರವಿರಾಜ ಕೊರವಿ, ಸಚಿನ ಕಡಗಂಚಿ, ಮಂಜುನಾಥ ಶೆಟ್ಟಿ, ಚನ್ನು ಬಟಗೆ, ಮಹೇಶ ಪಟ್ಟಣ, ಮಲ್ಲಿಕಾರ್ಜುನ, ಶಾಂತು ದುಧನಿ, ಗಂಗಾಧರ ಬಿಲಗುಂದಿ, ಶರಣುಸಿಗಿ ಇತರರಿದ್ದರು.

ಹನುಮನ ಜನ್ಮಸ್ಥಾನ ಕಿಷ್ಕಿಂದೆಯ ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ನೂರಾರು ಮಾಲಾಧಾರಿಗಳೊಂದಿಗೆ ಯಾತ್ರೆ ನಡೆಸಲಾಗುತ್ತಿದೆ. ಶಕ್ತಿ, ಶ್ರದ್ಧೆ, ನಿಷ್ಠೆಗೆ ಪ್ರತೀಕವಾಗಿರುವ ಹನುಮ ದೇವರು ನಾಡಿಗೆ ಸುಖ ಶಾಂತಿ ಸಮೃದ್ಧಿ ಕಲ್ಪಿಸಲಿ. ದುಷ್ಟ ಸಂಹಾರ ಮಾಡಲಿ.

| ಚಂದು ಪಾಟೀಲ್, ಜಿಲ್ಲಾಧ್ಯಕ್ಷ

ಮಹಾನಗರ ಬಿಜೆಪಿ ಕಲಬುರಗಿ