ಬೀದರ್: ಉಡಾನ್ ಉತ್ಸವ- 2022 ರ ಅಂಗವಾಗಿ ನಗರದ ದಿ ಹನಿ ಬೀಸ್ ಪಬ್ಲಿಕ್ ಸ್ಕೂಲ್‍ನಲ್ಲಿ ವಿಜ್ಞಾನ ಹಾಗೂ ಸಮಾಜ ವಸ್ತು ಪ್ರದರ್ಶನ ನಡೆಯಿತು.
ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಹಾಗೂ ಸಮಾಜ ವಿಷಯಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳು ಎಲ್ಲರ ಗಮನ ಸೆಳೆದವು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಮ್ಮದ್ ಮುಜಮ್ಮಿಲ್ ಪಟೇಲ್ ಪ್ರದರ್ಶನವನ್ನು ಉದ್ಘಾಟಿಸಿದರು. ಅಲಿಯಾಬಾದ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರತಕುಮಾರ ಅಭಿಮಾನ್, ನೌಬಾದ್ ಸಿಆರ್‍ಪಿ ಶ್ರೀದೇವಿ ಹೂಗಾರ್, ನಿರಂತರ ಫೌಂಡೇಷನ್‍ನ ನಿರಂಜನ ಶೀಲವಂತ, ಪ್ರಾಚಾರ್ಯೆ ಲಕ್ಷ್ಮಿ ಮುಗಳಿ ಇದ್ದರು.