ಜಿಲ್ಲೆ

ಹನಿ ನೀರಾವರಿಗೆ ಸಹಾಯಧನ

ಚಾಮರಾಜನಗರ: ತೋಟಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ-ಸೂಕ್ಷ್ಮ ಹನಿ ನೀರಾವರಿ (ಪಿಎಂಕೆಎಸ್‌ವೈ) ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲು ಸಹಾಯಧನ ನೀಡಲಾಗುವುದು.

ತೋಟಗಾರಿಕೆ ಬೆಳೆಗಳಾದ ಟೊಮೆಟೊ, ಈರುಳ್ಳಿ, ಹೂವಿನ ಬೆಳೆಗಳು, ಪಪ್ಪಾಯ, ಬಾಳೆ, ಅರಿಶಿಣ, ವಿವಿಧ ತರಕಾರಿ, ಹಣ್ಣಿನ ಬೆಳೆಗಳಿಗೆ ಹನಿ ನೀರಾವರಿ ಉಪಕರಣ ಅಳವಡಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ರಷ್ಟು ಸಹಾಯಧನ ನಿಗದಿಪಡಿಸಲಾಗಿದೆ. ರೈತರು ಈ ಯೋಜನೆಯಡಿ ಸಹಾಯಧನ ಪಡೆದು 7 ವರ್ಷ ಪೂರ್ಣಗೊಂಡಿದ್ದಲ್ಲಿ ಎರಡನೇ ಬಾರಿ ಅದೇ ಜಮೀನಿನ ಫಲಾನುಭವಿಗಳು ಸೂಕ್ಷ್ಮ ಹನಿ ನೀರಾವರಿ ಅಳವಡಿಸಿಕೊಂಡಲ್ಲಿ ಸಹಾಯಧನ ಒದಗಿಸಲಾಗುವುದು.

ಆಸಕ್ತ ರೈತರು ಅಗತ್ಯ ದಾಖಲಾತಿಗಳನ್ನು ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ಕಾರ್ಯದೇಶ ಪಡೆದು ಸರ್ಕಾರದ ತೋಟಗಾರಿಕೆ ಇಲಾಖೆಯ ಅನುಮೋದಿತ ಡ್ರಿಪ್ ಕಂಪನಿ ಅಥವಾ ಸಂಸ್ಥೆಗಳಿಂದ ಐಎಸ್‌ಐ ಗುಣಮಟ್ಟದ ಹನಿ ನೀರಾವರಿ ಉಪಕರಣ ಆಳವಡಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.