ಜಿಲ್ಲೆ

ಹನಿ ನೀರಾವರಿ ಉಪಕರಣ ಕೊಡಿಸುತ್ತೇನೆಂದು ರೈತನಿಂದ ೨.೪೦ ರೂ. ಲಕ್ಷ ವಂಚನೆ

ಕಲಬುರಗಿ: ಹನಿ ನೀರಾವರಿ ಉಪಕರಣಗಳನ್ನು ಸರ್ಕಾರದ ಯೋಜನೆಯಡಿ ಕೊಡಿಸುವುದಾಗಿ ಹೇಳಿ ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿಯೊಬ್ಬರು ರೈತನಿಂದ ೨.೪೦ ಲP್ಷÀ ರೂ. ಪಡೆದು ವಂಚಿಸಿದ್ದಾರೆ. ಯಾದಗಿರಿ ಜಿ¯್ಲÉ ಸುರಪುರ ತಾಲೂಕಿನ ಏವೂರ ಗ್ರಾಮದ ರಾಚಪ್ಪ ಸಿದ್ದಣ್ಣ ಮೋಸಕ್ಕೆ ಒಳಗಾದ ರೈತ. ರೇಷ್ಮೆ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಅಬ್ದುಲï ನಯೀಮ್ ಚೌಧರಿ ವಿರುದ್ಧ ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣ ನೀಡಿದ ಸ್ಥಳ ಆಧರಿಸಿ ಸ್ಟೇಷನ್ ಬಜಾರ್ ಠಾಣೆಗೆ ಕೇಸ್ ವರ್ಗಾವಣೆ ಆಗಿದೆ. ರೈತ ರಾಚಪ್ಪ ೨೦೧೯-೨೦ರಲ್ಲಿ ೬.೧೫ ಎಕರೆ ರೇಷ್ಮೆ ಬೆಳೆದಿದ್ದು, ನೀರಿಲ್ಲದೆ ಬೆಳೆ ಬಾಡಿತ್ತು. ಅಂದಿನ ರೇಷ್ಮೆ ಸಹಾಯಕ ನಿರ್ದೇಶಕ ಅಬ್ದುಲï ಹಾಗೂ ವಲಯ ಅಧಿಕಾರಿ ರಾಜಾ ಪಟೇಲ್ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ನೀರಿಲ್ಲದೆ ಬೆಳೆ ಒಣಗುತ್ತಿದ್ದು, ೨.೪೦ ಲP್ಷÀ ರೂ. ನೀಡಿ ಹನಿ ನೀರಾವರಿ ಉಪಕರಣ ಹಾಕಿಸಿಕೊಳ್ಳಿ. ಅನುದಾನ ಬಂದಾಗ ಹಣ ಮಂಜೂರು ಮಾಡಿಸುವೆ ಎಂದು ನಂಬಿಸಿ ಹಣ ಪಡೆದಿದ್ದರು. ನಿವೃತ್ತಿ ಹೊಂದಿದರೂ ಹಣ ಕೊಡದಿರುವುದಕ್ಕೆ ರೈತ ರಾಚಪ್ಪ ದೂರು ದಾಖಲಿಸಿz್ದÁರೆ.