ಖಂಜರಗಲ್ಲಿಯ ಜೂಜು ಅಡ್ಡೆಮೇಲೆ ದಾಳಿ ನಡೆಸಿದ ಪೊಲೀಸರು 18 ಜುಜೂಕೋರರನ್ನು ಬಂಧಿಸಿದ್ದಾರೆ. ಡಿಸಿಪಿ ಡಾ.ವಿಕ್ರಂ ಆಮ್ಟೆ, ಮಾರ್ಕೆಟ್ ಠಾಣೆ ಸಿಬ್ಬಂದಿ ಇದ್ದಾರೆ. 
ಜಿಲ್ಲೆ

ಹದಿನೆಂಟು ಜೂಜುಕೋರರ ಬಂಧನ

ಬೆಳಗಾವಿ: ನಗರದಲ್ಲಿನ ಜೂಜು ಅಡ್ಡೆ ಮೇಲೆ ಶನಿವಾರ ತಡರಾತ್ರಿ ಡಿಸಿಪಿ ಆಮ್ಟೆ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, 18 ಜೂಜು ಕೋರರನ್ನು ಬಂಧಿಸಿದ್ದಾರೆ. ಅಲ್ಲದೆ, ಅವರ ಬಳಿಯಿದ್ದ ಲಕ್ಷಾಂತರ ರೂ. ಜಪ್ತಿ ಮಾಡಿದ್ದಾರೆ.

ನಗರದ ಖಂಜರ್ ಗಲ್ಲಿಯಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಜೂಜುಕೋರರಿಂದ 1.33 ಲಕ್ಷ ರೂ. ನಗದು, 18 ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ. ಖಂಜರಗಲ್ಲಿ ನಿವಾಸಿಗಳಾದ ಜುಬೇರ್ ಸುಬೇದಾರ, ಆರೀಫ್ ಕೊತ್ವಾಲ್, ಅಯಾಜ್‌ಬಾಬು ಖತೀಬ್, ಅಬ್ದುಲ್‌ಸಲಾಂ ಬಾಳೇಕುಂದ್ರಿ, ಸೊಹೈಲ್ ಮುಲ್ಲಾ, ಷರ್ೀ ಮುಲ್ಲಾ, ಅಬುತಾಲಿಪ್ ಶೇಖ್, ಆಸ್ೀ ಸೈಯ್ಯದ್, ಅಯೂಬಖಾನ್ ಪಠಾಣ, ವಾಸಿಂ ಸೌದಾಗರ್, ಇಮ್ರಾನ್ ಅಬ್ದುಲ್‌ರಹೀಂ ಪಟೇಲ್, ವಾಸಿಂ ಅಲವಾಡಕರ, ಮುಸ್ತಾಕ್ ತಹಸಿಲ್ದಾರ್, ಇಕ್ಬಾಲ್ ನರೇಗಲ್, ಫಿರೋಜ್ ಪಠಾಣ, ರಫೀಕ್ ಮಹಮ್ಮದ್‌ಶಫಿ ತಹಸಿಲ್ದಾರ್, ಸಲೀಂಅಬ್ದುಲ್ ಖತೀಬ್, ಸಾಹನಾಸೀರ್ ಪಠಾಣ ಬಂಧಿತರು. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.