ಹನೂರಿನಲ್ಲಿ ಬೀದಿ ನಾಟಕ ಪ್ರದರ್ಶನಕ್ಕೆ ಪಪಂ ಮುಖ್ಯಾಧಿಕಾರಿ ಮೂರ್ತಿ ಚಾಲನೆ ನೀಡಿದರು. ನಟರಾಜು, ಮಹೇಶ್, ಸುಶೀಲ, ಶಾಂತರಾಜು ಇತರರು ಇದ್ದರು.  
ಜಿಲ್ಲೆ

ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಕೆಲಸ ನೀಡಬೇಡಿ

ಹನೂರು: ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ನೂಕುವುದು ಹಾಗೂ ಕೆಲಸಕ್ಕೆ ಸೇರಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ ತಿಳಿಸಿದರು.

ಬಾಲ ಕಾರ್ಮಿಕ ಪದ್ಧತಿ ನಿಷೇಧ ಕುರಿತು ಕಾರ್ಮಿಕ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಸೋಮವಾರ ಪಟ್ಟಣದಲ್ಲಿ ಆಯೋಜಿಸಿದ್ದ ಜನಜಾಗೃತಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೆಲ ಪಾಲಕರು ಕುಟುಂಬದ ಆರ್ಥಿಕ ಸ್ಥಿತಿ ನಿಭಾಯಿಸಲು ಮಕ್ಕಳನ್ನು ಅಂಗಡಿ, ಗ್ಯಾರೇಜ್, ಹೋಟೆಲ್‌ಗಳಿಗೆ ಕೆಲಸಕ್ಕೆಂದು ದೂಡುತ್ತಿದ್ದಾರೆ. ಇದು ಅಪರಾಧ. ಈ ಬಗ್ಗೆ ತಿಳಿದಿದ್ದರೂ ಕೆಲ ಮಾಲೀಕರು ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಒಂದು ವೇಳೆ ಬಾಲ ಕಾರ್ಮಿಕರು ಕಂಡುಬಂದಲ್ಲಿ ಸಂಬಂಧಪಟ್ಟವರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಳಿಕ ಪಟ್ಟಣದ ಬಸ್ ನಿಲ್ದಾಣ ಹಾಗೂ ಪ್ರಮುಖ ಬಡಾವಣೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಬಾಲ್ಯ ವಿವಾಹ ನಿಷೇಧ ಕುರಿತು ನಾಟಕ ಪ್ರದರ್ಶಿಸಲಾಯಿತು. ಜಿಲ್ಲಾ ರಂಗದೀವಿಗೆ ಕಲಾ ತಂಡದ ನಟರಾಜು, ರಂಗ ಜಂಗಮ ತಂಡದ ಮಹೇಶ್, ಮಹದೇಶ್ವರ ಜನಪದ ಕಲಾ ತಂಡದ ಸುಶೀಲಾ, ರಂಗ ದೇಗುಲ ತಂಡದ ಶಾಂತರಾಜು ಹಾಗೂ ಕಲಾ ತಂಡದ ಸದಸ್ಯರು, ಪಪಂ ನೌಕರರು ಇದ್ದರು.