ಜಿಲ್ಲೆ

ಹದಿ-ಹರೆಯದವರು ಆರೋಗ್ಯದ ಕಾಳಜಿ ವಹಿಸಲಿ

ಕಲಬುರಗಿ: ಹರೆಯದ ವಯಸ್ಸಿನವರಿಗೆ ಮಾನಸಿಕ ಸ್ವಾಸ್ಥö್ಯದ ಬಗ್ಗೆ ಅರಿವು ತುಂಬಾ ಮುಖ್ಯ ಎಂದು ಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್‌ನಿಂದ ಬುಧವಾರ ಆಯೋಜಿಸಿದ್ದ ಡಾ.ಎಸ್.ಎಸ್.ಸಿದ್ದಾರೆಡ್ಡಿ ಸ್ಮರಣಾರ್ಥ ಹದಿ ಹರೆಯದವರ ಮನೋಸ್ವಾಸ್ಥÈ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಹದಿ ಹರೆಯದವ ದೇಹದಲ್ಲಿ ಅನೇಕ ಬದಲಾವಣೆಗಳು ಕಾಣುತ್ತವೆ. ಈ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆರೋಗ್ಯದ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಹದಿಹರೆಯ ಎಂಬುದು ಎಲ್ಲರ ಜೀವನದ ಒಂದು ಮಹತ್ವದ ಘಟ್ಟ. ಅಲ್ಲಿ ಆಸೆಗಳಿಗೆ, ಕನಸುಗಳಿವೆ. ಅವುಗಳನ್ನು ಪಡೆಯುವಲ್ಲಿ ವಿಫಲ ಹಾಗೂ ಸಫಲ ಯತ್ನಗಳಿವೆ. ಈ ವಯಸ್ಸಿನಲ್ಲಿ ಮಕ್ಕಳು ದೈಹಿಕ ಆರೋಗ್ಯದ ಜತೆಗೆ ಜೀವನದ ಗುರಿ ಸಾಧಿಸುವ ಕಡೆಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ, ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ, ಡಾ.ಸೀಮಾ ಪಾಟೀಲ್, ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್.ಎಸ್.ಹಿರೇಮಠ ಇದ್ದರು.
ಪದ್ಮಜಾ ವೀರಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಡಾ.ಶಶಿಶೇಖರ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಕಾಮೇಶ ಧಾಮಾ ನಿರೂಪಣೆ ಮಾಡಿದರು. ಡಾ.ಶಾಂತಲಿAಗ ಘಂಟೆ ವಂದಿಸಿದರು.