ಜಿಲ್ಲೆ

ಹತ್ತಿಕುಣಿ ಜಲಾಶಯ ಫುಲ್ ಭರ್ತಿ

ಯಾದಗಿರಿ : ತಾಲೂಕಿನ ಹತ್ತಿಕುಣಿ ಗ್ರಾಮದ ಜಲಾಶಯ ಭರ್ತಿಯಾಗಿ ರೈತರಲ್ಲಿ ಸಂತಸ ಮೂಡಿದ್ದು, ಜಲಾನಯನ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಜೂನ್ ತಿಂಗಳ ಆರಂಭದಲ್ಲಿ ಮುಂಗಾರು ಮಳೆ ಆಗಿರಲಿಲ್ಲ. ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿ ರೈತರಲ್ಲಿ ಆತಂಕ ಮನೆ ಮಾಡಿತ್ತು. ಇದರಿಂದ ಬಿತ್ತನೆ ಮಾಡಿದ ಹೆಸರು, ಹತ್ತಿ ಇನ್ನಿತರ ಬೆಳೆಗಳು ಸರಿಯಾಗಿ ಬೆಳೆಯದೆ ನಷ್ಟ ಅನುಭವಿಸಿದ್ದರು. ಆದರೆ, ಜುಲೈ ತಿಂಗಳಲ್ಲಿ ಸುರಿದ ನಿರಂತರ ಮಳೆಗೆ ಜಲಾಶಯ ಭರ್ತಿಯಾಗಿದೆ.
ಜಲಾಶಯ ಒಟ್ಟು ೩೦ ಅಡಿ ಎತ್ತರವಿದ್ದು, ೦.೩೫೨ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದೇ ನೀರನ್ನು ಅವಲಂಬಿಸಿ ಹತ್ತಿಕುಣಿ, ಹೊನಗೇರಾ, ಕಟಗಿ ಶಹಾಪುರ, ದಸರಾಬಾದ್, ಯಡ್ಡಳ್ಳಿ ಗ್ರಾಮಗಳ ಅಂದಾಜು ೪೧೪೫ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಲಿದೆ.
ಹಸಿರು ಬೆಟ್ಟಗಳ ಮಧ್ಯೆ ಇರುವ ಜಲಾಶಯಕ್ಕೆ ಹೆಚ್ಚುವರಿಯಾಗಿ ಹರಿದು ಬರುತ್ತಿರುವ ನೀರನ್ನು ಗೇಟ್‌ಗಳ ಮೂಲಕ ಹಳ್ಳಕ್ಕೆ ಹರಿಸಲಾಗುತ್ತಿದೆ. ಜಲಾಶಯ ಭರ್ತಿಯಾಗಿರುವ ಸುದ್ದಿ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಲ್ಲಿನ ನಿಸರ್ಗ ಸೌಂದರ್ಯ ವೀಕ್ಷಿಸಿ, ಕೆಲ ಸಮಯ ಕಳೆದು ಸಂತಸದಿAದ ತೆರಳುತ್ತಿದ್ದಾರೆ. ನದಿಗೆ ನೀರು ಬಿಡುತ್ತಿದ್ದರಿಂದ ಜನರು ಹಳ್ಳಕ್ಕೆ ಇಳಿಯಕೂಡದು ಎಂದು ಎಇಇ ಚೇತನ್ ಕಳಸ್ಕರ್ ತಿಳಿಸಿದ್ದಾರೆ.