ಜಿಲ್ಲೆ

ಹಣ್ಣು, ತರಕಾರಿ ಖರೀದಿ ಹಣ ನೀಡದ ಹಾಪ್‌ಕಾಮ್ಸ್

Ramanagara

ರಾಮನಗರ: ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಪ್‌ಕಾಮ್ಸ್ ಕಳೆದ 2 ತಿಂಗಳಿಂದಲೂ ರೈತರಿಂದ ಖರೀದಿ ಮಾಡಿರುವ ಹಣ್ಣು ಮತ್ತು ತರಕಾರಿಗಳಿಗೆ ಹಣ ನೀಡದೆ ಸತಾಯಿಸುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಬೆಂಗಳೂರು ಸುತಮುತ್ತಲ ಜಿಲ್ಲೆಗಳ ರೈತರು ತಾವು ಬೆಳೆದ ಬೆಳೆಗಳನ್ನು ಹಾಪ್‌ಕಾಮ್ಸ್‌ಗೆ ಮಾರಾಟ ಮಾಡುತ್ತಾರೆ. ಹಲವಾರು ವರ್ಷಗಳಿಂದಲೂ ಮಾರಾಟ ಮಾಡಿದ ನಂತರ ನಿಗದಿತ ಅವಧಿಯಲ್ಲಿಯೇ ಹಣ ರೈತರ ಕೈ ಸೇರುತ್ತಿತ್ತು. ಆದರೆ 2021ರ ಡಿ. 8ರಿಂದಲೂ ಮಾರಾಟ ಮಾಡಿದ ವಿವಿಧ ಹಣ್ಣು ಮತ್ತು ತರಕಾರಿಗಳ ಹಣ ರೈತರಿಗೆ ಸಂದಾಯವಾಗಿಲ್ಲ. ಇದು ಸಂಕಷ್ಟದಲ್ಲಿರುವ ಬೆಳೆಗಾರರನ್ನು ಚಿಂತೆಗೀಡುಮಾಡಿದೆ.

ಬರಬೇಕಿದೆ ಕೋಟ್ಯಂತರ ಹಣ: ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ 2021ರ ಡಿ.8ರಿಂದ 2022 ಜ.13ವರೆಗೆ 25 ಸಾವಿರ ರೂ.ಗಳಿಗಿಂತ ಕಡಿಮೆ ಮೊತ್ತದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಿದ 8,81,0344 ರೂ. ಹಾಗೂ 25 ಸಾವಿರ ರೂ. ಮೇಲ್ಪಟ್ಟು 2021ರ ನವೆಂಬರ್ 21ರಿಂದ 2022ರ ಜ.13ರವರೆಗೆ ಮಾರಾಟ ಮಾಡಿದ 1,35,44,090 ರೂ.ಗಳನ್ನು ಹಾಪಕಾಮ್ಸ್ ರೈತರಿಗೆ ಸಂದಾಯ ಮಾಡಬೇಕಿದೆ. ಇನ್ನು ಹಣ್ಣಿನ ಉಗ್ರಾಣಗಳು, ಈರುಳ್ಳಿ ಉಗ್ರಾಣಗಳು, ಸಿರಿಧಾನ್ಯ ಉಗ್ರಾಣ, ವಾಹನ ನಿರ್ವಹಣೆ, ನೌಕರರ ಇಎಸ್‌ಐ, ಸೇರಿ ಒಟ್ಟು 6.41 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ. ಇದರಿಂದ ರೈತರು ಮತ್ತು ಹಾಪ್‌ಕಾಮ್ಸ್‌ನಲ್ಲಿ ದುಡಿಯುವ ಸಿಬ್ಬಂದಿಗೂ ತೊಂದರೆ ಎದುರಾಗಿದೆ.

ರೈತರಿಗೆ ಸಂಕಷ್ಟ: ಕಳೆದ 2 ತಿಂಗಳಿಂದಲೂ ಹಣ ಸಂದಾಯ ಮಾಡದಿರುವುದು ರೈತರನ್ನು ಅಕ್ಷರಶಃ ಸಂಕಷ್ಟಕ್ಕೆ ದೂಡಿದೆ. ದೂರದ ಊರುಗಳಿಂದ ಹಣ ಖರ್ಚು ಮಾಡಿ ರೈತರು ಮಾರುಕಟ್ಟೆಗೆ ತರಕಾರಿ ಹಾಗೂ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ಮಾರಾಟ ಮಾಡಿದ 20 ದಿನಗಳ ಒಳಗಾಗಿ ರೈತರ ಖಾತೆಗೆ ಹಣ ಜಮೆ ಆಗುತ್ತದೆ. ಕೆಲವರಿಗೆ ನಗದು ರೂಪದಲ್ಲಿಯೂ ಹಣ ನೀಡಲಾಗುತ್ತಿದೆ. ಆದರೆ, ಈಗ 2 ತಿಂಗಳು ಕಳೆದರೂ ಹಣ ದೊರೆಯದಿರುವುದು ಕರೊನಾ ಸಂದರ್ಭದಲ್ಲಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಅಧಿಕಾರಿಗಳು ಹೇಳೋದೇ ಬೇರೆ: ಇನ್ನು ರೈತರಿಗೆ ಹಣ ಸಂದಾಯ ಮಾಡದಿರುವುದನ್ನು ಒಪ್ಪಿಕೊಳ್ಳುವ ಹಾಪ್‌ಕಾಮ್ಸ್ ಅಧಿಕಾರಿಗಳು, ನಮಗೆ ಬರಬೇಕಿರುವ ಹಣ ಹೊರಗಿನಿಂದ ಬರುತ್ತಿಲ್ಲ. ಈ ಕಾರಣದಿಂದಾಗಿ ರೈತರಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಮಹಿಳಾ ಮಕ್ಕಳು ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಬಿಎಚ್‌ಇಎಲ್,ಎಸ್ಥೆಗಳಿಗೆಚ್‌ಎಎಲ್‌ನಂತಹ ಸಂ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡುತ್ತೇವೆ. ಆದರೆ ಇವರಿಂದಲೇ ಹಾಪ್‌ಕಾಮ್ಸ್‌ಗೆ ಸುಮಾರು 2 ಕೋಟಿ ರೂ. ಬಂದಿಲ್ಲ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ರೈತರಿಗೆ ಹಣ ನೀಡಲಾಗುತ್ತಿಲ್ಲ ಎನ್ನುತ್ತಾರೆ.

ರೈತರಿಂದ ಖರೀದಿಸಿದ ಹಣ್ಣು ಮತ್ತು ತರಕಾರಿಗೆ 2.15 ಕೋಟಿ ರೂ, ನೌಕರರ ಇಎಸ್‌ಐ, ಪಿಎ್ ನಿಧಿಗೆ ಸೇರಬೇಕಾದ 1.60 ಕೋಟಿ ರೂ., ವಿವಿಧ ಉಗ್ರಾಗಳಿಗೆ ನೀಡಬೇಕಿರುವ ಸುಮಾರು 3 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿರುವುದು ಹಾಪ್‌ಕಾಮ್ಸ್ ನಷ್ಟಕ್ಕೆ ಸಿಲುಕಿರುವ ಸೂಚನೆಯನ್ನು ನೀಡಿದೆ. ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿರುವ 2 ಕೋಟಿ ರೂ.ನಷ್ಟು ಹಣ್ಣು ಮತ್ತು ತರಕಾರಿಗಳ ಬಾಕಿ ಹೊರತುಪಡಿಸಿ ಇನ್ನೂ 4 ಕೋಟಿ ರೂ.ಗಳಿಗೂ ಮಿಗಿಲಾದ ಇತರ ಬಾಕಿಗಳನ್ನು ಏಕೆ ಉಳಿಸಿಕೊಂಡಿದೆ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ತೋಟಗಾರಿಕೆ ಸಚಿವರು ಗಮನ ಹರಿಸಿ, ರೈತರ ಸಂಸ್ಥೆಯಲ್ಲಿ ಇರುವ ಸಮಸ್ಯೆಯನ್ನು ಪರಿಹಾರ ಮಾಡಬೇಕಿದೆ.

ನಷ್ಟದಲ್ಲಿಯೇ ಹಾಪ್‌ಕಾಮ್ಸ್?

---ಉಮೇಶ್ ಮಿರ್ಜಿ, ವ್ಯವಸ್ಥಾಪಕ ನಿರ್ದೇಶಕ ಹಾಪ್‌ಕಾಮ್ಸ್ನಾವು ವಿವಿಧ ಸಂಸ್ಥೆಗಳಿಗೆ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡುತ್ತೇವೆ. ಅವರಿಂದಲೂ ನಮಗೆ ಹಣ ಬಂದಿಲ್ಲ. ಹಿಂದಿನಿಂದ ಸರಿಯಾದ ರೀತಿಯಲ್ಲಿಯೇ ರೈತರಿಂದ ಪಡೆದ ಹಣ್ಣು ತರಕಾರಿಗೆ ಹಣ ನೀಡುತ್ತಿದ್ದೇವೆ. ಈಗ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸಲಾಗುವುದು. ರೈತರು ಈಗಾಗಲೇ ಸಂಕಷ್ಟೆ ಸಿಲುಕಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹಣ ನೀಡದೇ ಇರುವುದು ಎಷ್ಟು ಸರಿ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಗಮನ ಹರಿಸಬೇಕು. ಕೂಡಲೇ ರೈತರಿಗೆ ಬಾಕಿ ಹಣವನ್ನು ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಿ. ಪುಟ್ಟಸ್ವಾಮಿ, ರೈತ ಸಂಘದ ಹಿರಿಯ ಮುಖಂಡ