ತೋರಣಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಯೋಜನೆಗೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ಅಶೋಕ ಮಜಲಟ್ಟಿ, ಕೃಷ್ಣಪ್ಪ ಜೋಗಿ, ಬಸವರಾಜ ಮಾಳಗೆ, ಅಶೋಕ ಖಾಡ, ಶಿವಾಜಿ ನಾಗರಾಳೆ, ವಿಜಯ ಕೋಠಿವಾಲೆ ಇತರರಿದ್ದರು. 
ಜಿಲ್ಲೆ

ಹಣ ಹೊಂದಾಣಿಕೆಯಲ್ಲಿ ಸರ್ಕಾರ ಮಗ್ನ


ಚಿಕ್ಕೋಡಿ: ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ಹೊಂದಾಣಿಕೆಯಲ್ಲಿ ಮಗ್ನವಾಗಿರುವುದರಿಂದ ಬರ ೂಷಣೆಗೆ ವಿಳಂಬ ಮಾಡುತ್ತಿದೆ ಎಂದು ಶಾಸಕ ದುಯೋರ್ಧನ ಐಹೊಳೆ ಆರೋಪಿಸಿದರು.

ತಾಲೂಕಿನ ತೋರಣಹಳ್ಳಿಯಲ್ಲಿ ಗ್ರಾಮದಿಂದ ಜೈನಾಪುರ ಗ್ರಾಮದವರೆಗಿನ 1 ಕೋಟಿ ರೂ. ವೆಚ್ಚದ 4 ಕಿಮೀ ರಸ್ತೆ ಅಭಿವದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ವರ್ಷ ಮಳೆ ಇಲ್ಲದೆ ಬರ ತಾಂಡವಾಡುತ್ತಿದೆ. ಬೆಳೆಗಳು ಕಮರಿಹೋಗುತ್ತಿವೆ. ಹೀಗಾಗಿ ರೈತರು ಕಂಗಾಲಾಗಿದ್ದರೂ ಸರ್ಕಾರ ನೆರವಿಗೆ ಧಾವಿಸುತ್ತಿಲ್ಲ ಎಂದರು.

ಸುಳ್ಳು ಭರವಸೆ ಕೊಟ್ಟು ಸರ್ಕಾರ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ಜಾರಿ ಮಾಡದೆ ಮಹಿಳೆಯರಿಗೆ ಮೋಸ ಮಾಡುತ್ತಿದೆ. 10 ಕೆಜಿ ಅಕ್ಕಿ ಕೊಡುತ್ತೇನೆಂದು 5 ಕೆಜಿ ಕೊಡುತ್ತಿದ್ದಾರೆ. ಗೃಹಲಕ್ಷಿ$್ಮ ಯೋಜನೆಯಡಿ ತಿಂಗಳಿಗೆ 2 ಸಾವಿರ ಕೊಡುತ್ತೇವೆಂದು ೂಷಿಸಿ ಇದೀಗ ಆ ಹಣವೂ ಸರಿಯಾಗಿ ತಲುಪಿಸುತ್ತಿಲ್ಲ ಎಂದು ಆರೋಪಿಸಿದರು. ಸರ್ಕಾರ ಬರೂಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಅಶೋಕ ಮಜಲಟ್ಟಿ, ಕೃಷ್ಣಪ್ಪ ಜೋಗಿ, ಬಸವರಾಜ ಮಾಳಗೆ, ಮಹಾದೇವ ಯಾದಗೂಡೆ, ಅಶೋಕ ಖಾಡ, ಶಿವಾಜಿ
ನಾಗರಾಳೆ, ವಿಜಯ ಕೋಠಿವಾಲೆ, ಗುತ್ತಿಗೆದಾರ ಸಂಭಾಜಿ ಚವಾಣ ಇತರರಿದ್ದರು.