ಧಾರವಾಡ: ಹಿಂದಿನ ಸರ್ಕಾರದ ಅವಽಯಲ್ಲಿ ಆರಂಭಿಸಲಾದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ವಿವಿಧ ಇಲಾಖೆಗಳ ಹಾಗೂ ನಿಗಮ, ಮಂಡಳಿ, ಪ್ರಾಽಕಾರಗಳ ಕಾಮಗಾರಿಗಳ ಹಣ ಬಿಡುಗಡೆ ಹಾಗೂ ಆರಂಭವಾಗದ ಕಾಮಗಾರಿಗಳನ್ನು ತಡೆಹಿಡಿಯಬೇಕು ಎಂದು ಹೊರಡಿಸಿದ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಸ ಪಾಟೀಲ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಈ ಆದೇಶದಿಂದ ನಿಯಮಾವಳಿ ಪ್ರಕಾರ ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ತೊಂದರೆಗೆ ಸಿಲುಕಲಿದ್ದಾರೆ. ಸರ್ಕಾರದ ಈ ಕ್ರಮ ಸಾಕಷ್ಟು ಸಮಸ್ಯೆ ಅನುಭವಿಸುತ್ತಿರುವ ಗುತ್ತಿಗೆದಾರರ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶವನ್ನು ಹಿಂಪಡೆದು ಗುತ್ತಿಗೆದಾರರ ಬಾಕಿ ಹಣವನ್ನು ಪಾವತಿ ಮಾಡುವ ಮೂಲಕ ಸಂಕಷ್ಟದಿAದ ಪಾರು ಮಾಡಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರ ಕ್ಷೇಮನಿಽ ಸಮಿತಿಯಲ್ಲಿ ದಕ್ಷಿಣ ಕರ್ನಾಟಕದ ಪ್ರತಿನಿಽಗಳು ಮಾತ್ರ ಇದ್ದಾರೆ. ಸಮಿತಿಯಲ್ಲಿ ಉತ್ತರ ಕರ್ನಾಟಕದ ಸಿವಿಲ್ ಗುತ್ತಿಗೆದಾರರ ಸಂಘದ ಪದಾಽಕಾರಿಗಳನ್ನೂ ಸೇರ್ಪಡೆ ಮಾಡಬೇಕು. ಈ ಮೂಲಕ ಎಲ್ಲ ಭಾಗಕ್ಕೂ ಸಮಾನ ಸ್ಥಾನಮಾನ ನೀಡಬೇಕು. ಹಲವು ಕಾಮಗಾರಿಗಳ ಅಂದಾಜು ಪತ್ರಿಕೆ ಒಟ್ಟುಗೂಡಿಸಿ ಪ್ಯಾಕೇಜ್ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಅಽಕ್ಷಕ ಇಂಜಿನಿಯರ್ ಅಂತಿಮ ಬಿಲ್‌ಗಳಿಗಾಗಿ ಮಾಡುವ ಮೇಲುರುಜು ಅಗತ್ಯವಿಲ್ಲ. ಗುತ್ತಿಗೆದಾರರ ಹಣ ಪಾವತಿಯಲ್ಲಿ ವಿಳಂಬವಾಗುವ ಈ ನಿಯಮ ತೆಗೆದು ಹಾಕಬೇಕು ಎಂದು ಪಾಟೀಲ ಆಗ್ರಹಿಸಿದರು.