ಸೇಡA ತಾಲೂಕಿನ ಕೋಡ್ಲಾ-ಬೆನಕನಹಳ್ಳಿಯಲ್ಲಿರುವ ಶ್ರೀ ಸಿಮೆಂಟ್ ಕಂಪನಿ ಎದುರು ಜಮೀನು ಕಳೆದುಕೊಂಡ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದು ಬಾನರ್, ಕಲ್ಯಾಣಪ್ಪ ಪಾಟೀಲ್ ಇದ್ದರು.  
ಜಿಲ್ಲೆ

ಹಣ ನೀಡಿಕೆಯಲ್ಲಿ ತಾರತಮ್ಯ ಸಹಿಸಲಾಗದು

ಸೇಡಂ: ಕೋಡ್ಲಾ-ಬೆನಕನಹಳ್ಳಿ ರೈತರು ಶ್ರೀ ಸಿಮೆಂಟ್ ಸ್ಥಾಪನೆಗೆ ತಮ್ಮ ನೂರಾರು ಎಕರೆ ಫಲವತ್ತಾದ ಜಮೀನು ನೀಡಿದ್ದರೂ ಅಲ್ಪ ಮೊತ್ತ ನೀಡಿ ಕಂಪನಿ ಕೈ ತೊಳೆದುಕೊಂಡಿದ್ದಲ್ಲದೆ ಕುಟುಂಬದವರಿಗೆ ನೌಕರಿಯೂ ನೀಡದೆ ಸತಾಯಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಕಿಡಿಕಾರಿದರು.

ಹಣ ನೀಡಿಕೆಯಲ್ಲಿ ತಾರತಮ್ಯ ಮಾಡಿದ್ದನ್ನು ಸರಿಪಡಿಸುವಂತೆ ಒತ್ತಾಯಿಸಿ ಮಂಗಳವಾರ ಕಂಪನಿ ಮುಖ್ಯ ಗೇಟ್ ಬಂದ್ ಮಾಡಿ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ೨೦೦೮ರಲ್ಲಿ ಕಂಪನಿಗೆ ಜಮೀನು ನೀಡಿದ ಸುಮಾರು ೪೦೦ ರೈತರಲ್ಲಿ ಒಬ್ಬೊಬ್ಬರಿಗೆ ಒಂದೊAದು ರೀತಿ ಹಣ ನೀಡಿ ಒಡೆದಾಳುವ ನೀತಿ ಅನುಸರಿಸಿದ್ದು ಸಹಿಸಲಾಗದು ಎಂದು ಗುಡುಗಿದರು.

ಹಣದಲ್ಲಿ ವ್ಯತ್ಯಾಸದ ಬಗ್ಗೆ ತಹಸೀಲ್ದಾರ್, ಎಸಿ, ಡಿಸಿ ಎಲ್ಲ ಕಡೆ ನಡೆದ ಸಭೆಗಳಲ್ಲಿ ಗಮನಕ್ಕೆ ತರಲಾಗಿದೆ. ಈ ಮಧ್ಯೆ ಕೆಲವರಿಗೆ ಬಾಕಿ ಉಳಿದ ೩.೬೮ ಲಕ್ಷ ರೂ. ಕೊಟ್ಟಿರುವ ಮಾಹಿತಿ ಇದ್ದು, ಉಳಿದವರ ಬಾಯಿ ಮುಚ್ಚಿಸುವ ಕೆಲಸ ಮಾಡಿದರೆ ನಡೆಯದು. ಎಲ್ಲರಿಗೂ ಸಮಾನ ಹಣದೊಂದಿಗೆ ನಿಯಮಾನುಸಾರ ಜಮೀನು ಖರೀದಿ ಮಾಡಿದಾಗಿನಿಂದ ಇದುವರೆಗಿನ ಬಡ್ಡಿ ಸೇರಿ ೧೫ ದಿನದಲ್ಲಿ ನೀಡಬೇಕು. ಇಲ್ಲದಿದ್ದರೆ ರೈತ ಕುಟುಂಬಗಳೊAದಿಗೆ ಬೇಡಿಕೆಗೆ ಸ್ಪಂದಿಸುವವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಾಬ್ ಕಾರ್ಡ್ ಮೂಲಕ ಕೆಲಸ ನೀಡಿದವರಿಗೆ ಇತರ ನೌಕರರಂತೆ ನಡೆಸಿಕೊಳ್ಳುತ್ತಿಲ್ಲ. ಏನಾದರೂ ನೆಪ ಹುಡುಕಿ ತೆಗೆದು ಹಾಕಿರುವ ಮಾಹಿತಿ ಇದೆ. ಇಂಥ ತಾರತಮ್ಯ ನಡೆಯುವುದಿಲ್ಲ. ಈ ಭಾಗದ ಮಕ್ಕಳ ಅನುಕೂಲಕ್ಕಾಗಿ ಶಾಲೆ, ಆರೋಗ್ಯ ದೃಷ್ಟಿಯಿಂದ ಇಲ್ಲಿ ಆಸ್ಪತ್ರೆ ಸ್ಥಾಪಿಸಬೇಕು, ಕಾರ್ಮಿಕರಿಗಾಗಿ ಕಡಿಮೆ ಬೆಲೆಯಲ್ಲಿ ಉಪಾಹಾರ, ಊಟ ನೀಡಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತೆಲ್ಕೂರ ಒತ್ತಾಯಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದು ಬಾನರ್ ಮಾತನಾಡಿ, ಈ ಭಾಗದ ರೈತರು ತಮ್ಮ ಜಮೀನಿಗೆ ಸಂಬAಧಿಸಿದAತೆ ವ್ಯತ್ಯಾಸದ ಮೊತ್ತ ನೀಡುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಕಂಪನಿ ಯಾವುದೇ ನಿರ್ಧಾರ ಕೈಗೊಳ್ಳದೆ ಮೊಂಡುತನ ಪ್ರದರ್ಶಿಸುತ್ತಿದೆ. ಇದು ಹೀಗೆ ಮುಂದುವರಿದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಗುಡುಗಿದರು.

ರೈತರಾದ ಕಾಶಪ್ಪ ಹೊನ್ನಾಯಕ್, ಶರಣಪ್ಪ ತಂಗಾನೋರ, ಹಣಮಂತ ಜೋಗಿ, ಭೀಮರಾಯ ಪಾಪಳ್ಳಿ, ಸೂರಪ್ಪ ತಂಗಾನೋರ, ಬಿಜೆಪಿ ಜಿಲ್ಲಾ ಪ್ರಧಾನ ಕರ‍್ಯದರ್ಶಿ ನಾಗಪ್ಪ ಕೊಳ್ಳಿ, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್, ಪ್ರಮುಖರಾದ ಕಲ್ಯಾಣಪ್ಪ ಪಾಟೀಲ್ ಮಳಖೇಡ, ಓಂಪ್ರಕಾಶ ಪಾಟೀಲ್, ತಿರುಪತಿ ಶಹಬಾದಕರ್, ರಾಘವೇಂದ್ರ ಮೆಕಾನಿಕ್, ವೆಂಕಟೇಶ ಪಾಟೀಲ್, ಸಿದ್ದಯ್ಯ ಸ್ವಾಮಿ ನಾಡೇಪಲ್ಲಿ, ಶಿವಾನಂದ ಸ್ವಾಮಿ, ಮಲ್ಲಿಕಾರ್ಜುನ ಪಾಟೀಲ್ ಭೂತಪುರ, ನಾಗರೆಡ್ಡಿ ಮುಧೋಳ, ಮಹಾವೀರ ಅಳ್ಳೊಳ್ಳಿ, ರಾಜು ಕಟ್ಟಿ, ಮಲ್ಲಿಕಾರ್ಜುನ ಹುಳಗೋಳ, ಸಿದ್ದು ಊಡಗಿ, ಜೈಪ್ರಕಾಶ ರಾಠೋಡ, ಶ್ರೀಮಂತ ಅವಂಟಿ, ರಾಜು ಮದರಿ, ಸಂಗಪ್ಪ ಕುಂಬಾರ, ವೀರೇಶ ಹೂಗಾರ, ಯಲ್ಲ ಮೇಸ್ತಿç, ಸಂತೋಷ ರಂಜೋಳ, ಸೂಗಪ್ಪ ರಂಜೋಳ, ಲಕ್ಷö್ಮಣ ಮಂತ್ರಿ, ಸಿದ್ದು ಸಾಹುಕಾರ, ರವಿ ಪಾಟೀಲ್ ಸಿಂಧನಮಡು ಇತರರಿದ್ದರು.