ಜಿಲ್ಲೆ

ಹಣ ದುರಪಯೋಗ ಆರೋಪ ನಿರಾಧಾರ

ಕನಕಪುರ: ತಾಲೂಕಿನ ಅರ್ಬನ್​ ಕೋ&ಆಪರೇಟಿವ್​ ಸೊಸೈಟಿ ಆಡಳಿತ ಮಂಡಳಿ ನಮ್ಮ ಮೇಲೆ ಕೈಗೊಂಡಿರುವ ಕ್ರಮ ಕಾನೂನು ಬಾಹಿರ. ಸಂ ಏಕಪಯ ಹಾಗೂ ದುರುದ್ದೇಶದಿಂದ ನಮ್ಮನ್ನು ಸೇವೆಯಿಂದ ವಜಾ ಮಾಡಿರುವುದು ಸರಿಯಲ್ಲ ಎಂದು ಸಿ.ರವೀಂದ್ರ ಹಾಗೂ ಎಸ್​.ಆರ್​.ಕುಮಾರಸ್ವಾಮಿ ಆರೋಪಿಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಶುಕ್ರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮೇಲಿನ ಆರೋಪ ನಿರಾಧಾರ. 2022-23ನೇ ಸಾಲಿನಲ್ಲಿ ಸಂದ ಆಂತರಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಹಣ ದುರುಪಯೋಗವಾದ ಆರೋಪವನ್ನು ನಮ್ಮ ಮೇಲೆ ಹಾಕಿ ಅಮಾನತುಗೊಳಿಸಿದ್ದಾರೆ. ಈ ಆದೇಶ ಪ್ರಶ್ನಿಸಿ ದಾವೆ ಸಲ್ಲಿಸಲಾಗಿದ್ದು, ದಾವೆ ಇತ್ಯರ್ಥವಾಗುವ ಅಂತಿಮ ಹಂತದಲ್ಲಿರುವಾಗಲೇ ನಮ್ಮ ಮೇಲೆ ಏಕಪಯ, ದುರುದ್ದೇಶದಿಂದ ವಿಚಾರಣಾಧಿಕಾರಿಗಳೊಂದಿಗೆ ಶಾಮೀಲಾಗಿ ಕ್ರಮಕೈಗೊಂಡಿದ್ದಾರೆ. ಈ ಬಗ್ಗೆ ಸಕ್ಷಮ ನ್ಯಾಯಾಲಯದಲ್ಲಿ ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದರಲ್ಲದೇ 2022&23ನೇ ಸಾಲಿನ ಶಾಸನ ಬದ್ಧ ಲೆಕ್ಕ ಪರಿಶೋಧನೆಯಲ್ಲಿ ಲೆಕ್ಕ ಪರಿಶೋಧನೆಯೇ ತಪ್ಪಾಗಿದ್ದು, ಇದನ್ನು ಪ್ರಶ್ನಿಸಿ ಜಿಲ್ಲಾ ಸಹಕಾರ ಸಂಗಳ ಲೆಕ್ಕ ಪರಿಶೋಧನಾ ನಿರ್ದೇಶಕರು ಸೇರಿ ಹಲವೆಡೆ ದೂರು ನೀಡಿದ್ದು, ವರದಿ ಸಲ್ಲಿಸಲಾಗುವುದು.

ಅಂದಿನ ವ್ಯವಸ್ಥಾಪಕ ರವೀಂದ್ರ ಅವರ ಮೇಲೆ 1.50 ಲಕ್ಷ ರೂ. ದುರುಪಯೋಗ ಪ್ರಕರಣದಲ್ಲಿ ಸಂದಲ್ಲಿನ ದಾಖಲೆಗಳಂತೆ ಪ್ರಸ್ತುತ ಪ್ರಭಾರ ಸಿಇಒಗಳೇ 1.05 ಲಕ್ಷ ರೂ. ಸಾಲದ ಖಾತೆಯನ್ನು ಖೈದುಗೊಳಿಸಿ ಠೇವಣಿ ಪತ್ರಗಳನ್ನು ಸಾಲಗಾರರಿಗೆ ವಾಪಸ್ಸು ಮಾಡಿದ್ದು, ಇದರಿಂದ ಸಂಕ್ಕೆ ನಯಾ ಪೈಸೆ ನಷ್ಟವಾಗದಿದ್ದರೂ ನಮ್ಮ ಮೇಲೆ ಆರೋಪ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್​.ಆರ್​.ಕುಮಾರಸ್ವಾಮಿ ಅವರ ಮೇಲಿನ 4.58 ಲಕ್ಷ ರೂ. ದುರುಪಯೋಗದ ಆರೋಪವನ್ನು ಲೆಕ್ಕ ಪರಿಶೋಧಕರು ತನಿಖೆಯಲ್ಲಿ ದೃಢಪಡಿಸದಿದ್ದರೂ ಸುಳ್ಳು ಆರೋಪ ಮಾಡಿ ವರದಿ ಪಡೆದು, ಸಂ&ಕೈಗೊಂಡಿರುವ ಕ್ರಮ ದೋಷಪೂರಿತವಾಗಿದೆ. ಇದನೆಲ್ಲ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗುವುದು. ನಾವು ಕರ್ತವ್ಯ ನಿರ್ವಹಿಸುವ ವೇಳೆ ನಮ್ಮ ಪರಿವ್ಯಾಪ್ತಿಗೆ ಬರದಿದ್ದರೂ ವ್ಯವಸ್ಥಿತವಾಗಿ ಸಂಚು ರೂಪಿಸಿ ಆರೋಪ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.