ಜಿಲ್ಲೆ

ಹಣ ದುಪ್ಪಟ್ಟು ಆಮಿಷ 27 ಲಕ್ಷ ರೂ. ವಂಚನೆ

ಕಲಬುರಗಿ: ಆರ್‌ಬಿಐ ನಿವೃತ್ತ ನೌಕರನಾಗಿದ್ದು, ನೋಟ್ ಪ್ರಿಂಟ್ ಮಾಡುವ ಮಷಿನ್ ಇದೆ. ಇದು ಗೌಪ್ಯ ವ್ಯವಹಾರವಾಗಿದ್ದು, ಯಾರಿಗೂ ಹೇಳದಿದ್ದರೆ ಹಣ ದುಪ್ಪಟ್ಟು ಮಾಡಿಕೊಡುತ್ತೇವೆ ಎಂದು ಆಮಿಷವೊಡ್ಡ ವ್ಯಕ್ತಿಯೊಬ್ಬರಿಂದ ೨೭ ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದ ಶೇಖ್ ಮಾಸೂಮ್ ಉದಗೀರ ವಂಚನೆಗೆ ಒಳಗಾದವ. ಬೆಳಗಾವಿ ಮೂಲದ ಡೊಂಗ್ರಿ ಮುಜಾವರ, ಶಿವಾನಂದ ಶಂಕ್ರಯ್ಯ, ಶಿವಾನಂದ, ಶಿವಲಿಂಗಯ್ಯ ಗಣಾಚಾರಿ, ದೀಪ ಅವಟಗಿ, ನವಿನï ಕರಡಪ್ಪ, ವಿನೋದ ಸೇರಿ ಇತರರ ವಿರುದ್ಧ ಕೇಸ್ ದಾಖಲಾಗಿದೆ.
ಎರಡು ವರ್ಷದ ಹಿಂದೆ ಶೇಖ್ ಮಾಸೂಮ್ ಅವರು ಎರಡು ವರ್ಷದ ಹಿಂದೆ ಮಲ್ಟಿಲೇಬಲ್ ಮಾರ್ಕೆಟಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಜಯಪುರಕ್ಕೆ ಹೋದಾಗ ಡೊಂಗ್ರಿ ಮತ್ತು ಶಿವಾನಂದ ಪರಿಚಯವಾಗಿದ್ದರು. ಅವರ ಜತೆ ಆಪ್ತತೆ ಹೆಚ್ಚಾಗಿದ್ದು, ಫೋನ್ ಮಾಡಿದ್ದಾಗ ಬೆಳಗಾವಿಗೆ ಬರುವಂತೆ ಮಾಸೂಮ್ ಆಹ್ವಾನಿಸಿ, ಹಣ ದುಪ್ಪಟ್ಟು ಮಾಡುವ ಬಗ್ಗೆ ತಿಳಿಸುತ್ತೇನೆ. ಒಮ್ಮೆ ಬೆಳಗಾವಿಗೆ ಬಂದು ಹೋಗಿ ಎಂದು ಪುಸಲಾಯಿಸಿದ್ದರು.

ಡೊಂಗ್ರಿ ಮಾತು ನಂಬಿದ ಮಾಸೂಮ್ ೨೦೨೩ರ ನವೆಂಬರ್ ೨೫ರಂದು ಬೆಳಗಾವಿಗೆ ಹೋದರು. ಅಲ್ಲಿ ತಾನು ಆರ್‌ಬಿಐ ಸೇವೆಯಿಂದ ನಿವೃತ್ತನಾಗಿದ್ದು, ನಮ್ಮಲ್ಲಿ ಹಣ ಪ್ರಿಂಟ್ ಮಾಡುವ ಮಷಿನ್ ಇದೆ. ಗೌಪ್ಯ ವ್ಯವಹಾರ ಮಾಡಿದರೆ ಹಣ ದುಪ್ಪಟ್ಟಾಗುತ್ತದೆ ಎಂದು ನಂಬಿಸಿದ್ದ. ಮಷಿನ್ ತೋರಿಸಿದ್ದರು. ಹಣ ಚಲಾವಣೆ ಮಾಡಿದರೆ ನಿಮಗೆ ಎರಡು ಪಟ್ಟು ದುಡ್ಡು ಸಿಗುತ್ತದೆ ಎಂದು ಆಸೆ ಹುಟ್ಟಿಸಿದರೂ ಅದಕ್ಕೆ ಕಿವಿಗೊಡದ ಮಾಸೂಮ್ ಸ್ವಗ್ರಾಮಕ್ಕೆ ಬಂದರು.

ಆದರೂ ಬಿಡದೆ ಮಾಸೂಮ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದ ಡೊಂಗ್ರಿ, ಜಮೀನು ಖರೀದಿಗೆ ಮನೆಯಲ್ಲಿ ಹಣ ಇರಿಸಿದ್ದು ಗೊತ್ತಾಗಿದೆ. ೨೦೨೪ ಜ.೬ರಂದು ಡೊಂಗ್ರಿ ಅವರು ಶಿವಾನಂದ, ಶಿವಲಿಂಗಯ್ಯ ಸೇರಿ ಇತರರೊಂದಿಗೆ ರಾತ್ರಿ ಮಾಸೂಮ್ ಮನೆಗೆ ಬಂದರು. ನಿಮ್ಮ ಬಳಿ ಹಣ ಇದ್ದು, ನೀಡಿದರೆ ಎರಡು ಪಟ್ಟು ಮಾಡಿಕೊಡುತ್ತೇವೆ. ಮಷಿನ್ ಇವೆ. ಏನೂ ಆಗಲ್ಲ ಎಂದು ನಂಬಿಸಿದ್ದಾರೆ. ಅವರ ಮಾತು ನಂಬಿ ಮಾಸೂಮ್ ಅವರು ೨೭ ಲP್ಷÀ ರೂ. ನೀಡಿದ್ದಾರೆ.

ಕೆಲ ದಿನದ ನಂತರ ವಿಚಾರಿಸಿದಾಗ ಸ್ಪಂದಿಸಿಲ್ಲ. ಬೆಳಗಾವಿಗೆ ತೆರಳಿ ಹಣ ನೀಡುವಂತೆ ಪಟ್ಟು ಹಿಡಿದಾಗ ತಾಳ್ಮೆಯಿಂದ ಇರು, ಪೊಲೀಸ್ ಕೇಸ್ ಅಂದ್ರೆ ನಿನ್ನ ಗತಿ ಕೊನೆ ಆಗುತ್ತೆ ಎಂದು ಹೆದರಿಸಿದ. ಪದೇ ಪದೆ ಫೋನ್ ಮಾಡಿದ್ದಾಗ ೩.೨೫ ಲಕ್ಷ ರೂ. ನೀಡಿದ್ದು, ೨೩.೭೫ ಲಕ್ಷ ಕೊಡದೆ ವಂಚಿಸಿದ್ದಾರೆ ಎಂದು ಜೇವರ್ಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.